Skip to main content


ಕಾಮನ್ ವೆಲ್ತ್ ಗೇಮ್ಸ್ ದೀಪಕ್ ಗೆ ಕಂಚು, ಜಿಮ್ನಾಸ್ಟಿಕ್ ಫೈನಲ್ಸ್ ಪ್ರವೇಶಿಸಿದ ರಾಕೇಶ್-ಯೋಗೇಶ್ವರ್

ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಪದಕ ಜಯಿಸಿದ ಕಿರಿಯ ವೇಟ್‌ಲಿಫ್ಟರ್ ಎಂಬ ಹೆಗ್ಗಳಿಕೆಗೆ ದೀಪಕ್ ಲಾಥರ್ ಪಾತ್ರರಾಗಿದ್ದಾರೆ.ಪುರುಷರ 69 ಕೆಜಿ ತೂಕ ವಿಭಾಗದಲ್ಲಿ ಕಂಚು ಜಯಿಸಿದ ಹರ್ಯಾಣದ 18ರ ಹರೆಯದ ಲಾಥರ್ ಈ ಸಾಧನೆ ಮಾಡಿದ್ದಾರೆ. ಲಾಥರ್ ಒಟ್ಟು 295 ಕೆಜಿ(136 ಕೆಜಿ 159 ಕೆಜಿ) ತೂಕ ಎತ್ತಿ ಹಿಡಿದು ಮೂರನೇ ಸ್ಥಾನ ಪಡೆದರು. ಜಿಮ್ನಾಸ್ಟಿಕ್ ಅಂಗಳದಲ್ಲಿ ಉತ್ತಮ ಪ್ರದರ್ಶನ ತೋರಿದ ಭಾರತದ ರಾಕೇಶ್ ಪಾತ್ರಾ ಹಾಗೂ ಯೋಗೇಶ್ವರ್ ಸಿಂಗ್ ಅವರು ಫೈನಲ್ಸ್‍ಗೆ ಪ್ರವೇಶಿಸಿದ್ದು ಪದಕ ಗೆಲ್ಲುವ ಆಸೆ ಚಿಗುರಿಸಿದ್ದಾರೆ.

short by Nithin

Comments