Skip to main content


ಸನ್ನಿ-ಡೇನಿಯಲ್ ಗೆ ಮದುವೆ ವಾರ್ಷಿಕೋತ್ಸವದ ಸಂಭ್ರಮ

ಹೆಸರಲ್ಲೆ ಮಾದಕತೆ ತುಂಬಿಕೊಂಡಿರುವ ನಟಿ ಅಂದ್ರೆ ಅದು ಸನ್ನಿ ಲಿಯೋನ್. ಇದೇ ಸನ್ನಿ ಲಿಯೋನ್ ಸಾಂಸರಿಕ ಜೀವನಕ್ಕೆ ಕಾಲಿರಿಸಿ 7 ವರ್ಷಗಳನ್ನು ಪೂರೈಸಿದ ಸಂಭ್ರಮದಲ್ಲಿದ್ದಾರೆ. ಹೌದು ಸನ್ನಿ ಡೇನಿಯಲ್ ನ ಮದುವೆ ಮಾಡಿಕೊಂಡು ಸುಮಾರು ೭ ವರ್ಷ ಕಳೆದಿದೆ. ಮದುವೆ ವಾರ್ಷಿಕೋತ್ಸವದಲ್ಲಿರುವ ಸನ್ನಿ ಪತಿ ಡೇನಿಯಲ್ ವೆಬರ್ ಗೆ ಭಾವನಾತ್ಮಕವಾಗಿ ಟ್ವಿಟ್ಟರ್ ನಲ್ಲಿ ಸಂದೇಶವನ್ನು ಕಳುಹಿಸಿದ್ದಾರೆ.
ನಾವಿಬ್ಬರು ದೇವರ ಮುಂದೆ ನಮ್ಮ ಪ್ರೀತಿಯನ್ನು ವಿನಿಮಯ ಮಾಡಿಕೊಂಡು ಇಂದಿಗೆ 7 ವರ್ಷಗಳು ಕಳೆದಿವೆ. ಇಬ್ಬರಲ್ಲಿಯೂ ಅಂದಿನ ಪ್ರೀತಿ ಇಂದಿಗೂ ಹಾಗೆ ಇದೆ. ಅಂದು ನಾನು ನಿನ್ನನ್ನು ಎಷ್ಟು ಪ್ರೀತಿಸುತ್ತಿದ್ದೇನೋ, ಇಂದು ಆ ಪ್ರೀತಿ ಇನ್ನು ಹೆಚ್ಚಾಗಿದೆ. ಹೀಗೆ ಇಬ್ಬರು ಸಂತೋಷದಿಂದ ಜೀವನದ ಪಯಣ ಮುಂದುವರೆಸೋಣ. ಲವ್ ಯೂ ಸೋ ಮಚ್ ಅಂತಾ ಮದುವೆ ವಾರ್ಷಿಕೋತ್ಸವದ ಶುಭಾಶಯಗಳು ಡೇನಿಯಲ್ ಎಂದು ತಮ್ಮ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಪತ್ನಿ ಸನ್ನಿ ಟ್ವೀಟ್ ಗೆ ಪ್ರತಿಕ್ರಿಯಿಸಿರುವ ಡೇನಿಯಲ್, ಇಂದಿಗೆ ನಾವಿಬ್ಬರು ನಮ್ಮ ಪಯಣ ಆರಂಭಿಸಿ 7 ವರ್ಷಗಳು ಕಳೆದಿವೆ. ನಾನು ಫಸ್ಟ್ ಡೇ ನಿನ್ನ ಭೇಟಿಯಾದ ದಿನದಂತೆ ಎಲ್ಲ ದಿನಗಳು ಹಾಗಿರಲಿ ಅಂತಾ ಇಷ್ಟಪಡುತ್ತೇನೆ ಅಂತಾ ಬರೆದು ಸನ್ನಿಯನ್ನು ಎತ್ತಿಕೊಂಡಿರುವ ಫೋಟೋ ಹಾಕಿಕೊಂಡಿದ್ದಾರೆ.  
     
short by Pawan / read more at Balkani News