Skip to main content


ಅತ್ಯುತ್ತಮ ಯೋಗಪಟು ಅಣ್ಣಾವ್ರು..

ಕೇವಲ ಅಭಿನಯ, ಹಾಡುಗಾರರಷ್ಟೇ ಅಲ್ಲ ಅಣ್ಣಾವ್ರು ಅತ್ಯುತ್ತಮ ಜೀವನ ಶೈಲಿಯನ್ನೂ ರೂಢಿಸಿಕೊಂಡಿದ್ದರು. ಅದರ ಒಂದು ಭಾಗವೇ ಯೋಗಾಸನ. ರಾಜ್ ಕುಮಾರ್ ಅವರಿಗೆ, 1978 ರಲ್ಲಿ ‘ಅಪರೇಷನ್ ಡೈಮಂಡ್ ರಾಕೆಟ್’ ಸಿನಿಮಾದ ನಂತರ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿತ್ತಂತೆ. ಅನಂತರ ಸಂಬಂಧಿಕರೊಬ್ಬರು ನೀಡಿದ ಸಲಹೆಯ ಮೇರೆಗೆ ರಾಜ್ ಕುಮಾರ್ ಯೋಗಾಸನ ಆರಂಭಿಸಿದರಂತೆ. ಸಾಕಷ್ಟು ಕಠಿಣ ಆಸನಗಳನ್ನು ಮಾಡುತ್ತಿದ್ದ ರಾಜ್ ಕುಮಾರ್ ಅವರಿಗೆ ಯೋಗಾಸನ ಒಂದು ಹವ್ಯಾಸವಾಗಿಬಿಟ್ಟಿತ್ತು. ಹೀಗಾಗಿಯೇ ವಯಸ್ಸಾದರೂ ಅವರು ಆರೋಗ್ಯವಾಗಿ, ಫಿಟ್ ಆಗಿದ್ದರು. ಅಲ್ಲದೇ ಪತ್ನಿ ಪಾರ್ವತಮ್ಮನವರಿಗೂ ಯೋಗ ಹೇಳಿಕೊಟ್ಟಿದ್ದರಂತೆ.    

short by Pawan / read more at Kannadadunia


Comments