Skip to main content


ಸೋನಮ್ ಕಪೂರ್ ಮ್ಯಾರೆಜ್ ಡೇಟ್ ಫಿಕ್ಸ್!

ಬಾಲಿವುಡ್ ಹಿರಿಯ ನಟ ಅನಿಲ್ ಕಪೂರ್ ಮಗಳು ಸೋನಮ್ ಕಪೂರ್ ಮದುವೆಯ ದಿನಾಂಕ ಫಿಕ್ಸ್ ಆಗಿದ್ದು, ಮೇ.11 ಅಥವಾ 12 ರಂದು ಸ್ವಿಟ್ಜರ್ ಲೆಂಡ್ ನ ಜಿನೆವಾದಲ್ಲಿ ನಡೆಯಲಿದೆ.ಹಲವು ವರ್ಷಗಳ ಗೆಳೆಯ ಆನಂದ್ ಅಹುಜಾ ಅವರನ್ನು ಸೋನಮ್ ಕಪೂರ್ ವರಿಸಲಿದ್ದಾರೆ ಎನ್ನಲಾಗುತ್ತಿದೆ. ಕುಟುಂಬದ ಆಪ್ತರು, ಸ್ನೇಹಿತರು ಮತ್ತು ಚಿತ್ರರಂಗದ ಗಣ್ಯರು ಮದುವೆ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ. ಎರಡು ದಿನಗಳ ಕಾಲ ಮದುವೆ ಕಾರ್ಯಕ್ರಮ ನಡೆಯಲಿದ್ದು, ಈಗಾಗಲೇ ತಯಾರಿ ಶುರುವಾಗಿದೆಯಂತೆ.ಹಿಂದೂ ಸಂಪ್ರದಾಯದಂತೆ ಮದುವೆ ಕಾರ್ಯ ನಡೆಯಲಿದ್ದು, ಸಂಗೀತ, ಮೆಹಂದಿ ಕಾರ್ಯಕ್ರಮವೂ ನಡೆಯಲಿದೆ ಎಂಬ ಸುದ್ದಿ ಹರಿದಾಡುತ್ತಿದೆ.

short by :Nithin / read more at Kannadanewsnow


Comments