Skip to main content


‘ಭಾರತ್ ಬಂದ್’ ನಂತರ ದೇಶಾದ್ಯಂತ ದಲಿತರಿಗೆ ಕಿರುಕುಳ ಹೆಚ್ಚಿದೆ: ಬಿಜೆಪಿ ಸಂಸದನ ಆರೋಪ

ಎಸ್ಸಿ/ಎಸ್ಟಿ ದೌರ್ಜನ್ಯ ತಡೆ ಕಾಯ್ದೆ ತಿದ್ದುಪಡಿ ವಿಚಾರಕ್ಕೆ ಸಂಬಂಧಿಸಿ ಇತ್ತೀಚೆಗೆ ನಡೆದ ‘ಭಾರತ್ ಬಂದ್’ ನಂತರ ದೇಶಾದ್ಯಂತ ದಲಿತರಿಗೆ ಕಿರುಕುಳ ನೀಡಲಾಗುತ್ತಿದೆ ಎಂದು ಬಿಜೆಪಿ ಸಂಸದ ಉದಿತ್ ರಾಜ್ ಆರೋಪಿಸಿದ್ದಾರೆ. “ಎಪ್ರಿಲ್ 2ರ ಬಂದ್ ನಲ್ಲಿ ಭಾಗವಹಿಸಿದ್ದ ದಲಿತರನ್ನು ಗುರಿಯಾಗಿಸಲಾಗುತ್ತಿದೆ. ಕಿರುಕುಳ ನೀಡಲಾಗುತ್ತಿದೆ ಎನ್ನುವ ವರದಿಗಳಿವೆ. ಇದು ನಿಲ್ಲಬೇಕು. ಬಾರ್ಮರ್, ಜಾಲೋರ್, ಜೈಪುರ, ಗ್ವಾಲಿಯರ್, ಮೀರತ್, ಬುಲಂದ್ ಶಹರ್, ಕರೋಲಿ ಹಾಗು ಇತರ ಭಾಗಗಳಿಂದ ನನಗೆ ಕರೆ ಬರುತ್ತಿದ್ದು, ಮೀಸಲಾತಿ ವಿರೋಧಿಗಳು ಮಾತ್ರವಲ್ಲದೆ, ಪೊಲೀಸರು ಕೂಡ ಹಲ್ಲೆ ನಡೆಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ” ಎಂದು ಉದಿತ್ ರಾಜ್ ಹೇಳಿದ್ದಾರೆ.     

short by Pawan / read more at Varthabharathi

Comments