Skip to main content


ಕಾಶ್ಮೀರದಲ್ಲಿ ಮುಗ್ಧರ ಹತ್ಯೆ ನಡೆಯುತ್ತಿದೆ ಎಂದ ಆಫ್ರಿದಿಗೆ ಗಂಭೀರ್ ತೀಕ್ಷ್ಣ ತಿರುಗೇಟು

ಕಾಶ್ಮೀರದಲ್ಲಿ ಮುಗ್ಧರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗುತ್ತಿದೆ ಎಂದು ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶಾಹೀದ್‌ ಆಫ್ರಿದಿ ಆರೋಪಿಸಿದ್ದು, ಇದಕ್ಕೆ ಕ್ರಿಕೆಟಿಗ ಗೌತಮ್ ಗಂಭೀರ್ ತೀಕ್ಷ್ಣ ತಿರುಗೇಟು ನೀಡಿದ್ದಾರೆ. ಆಫ್ರಿದಿ ಅವರನ್ನು ‘ಅಂಡರ್‌ ನೈಂಟೀನ್ (19 ವರ್ಷ ವಯೋಮಾನದ ಒಳಗಿನವರು)’ ಎಂದು ಗಂಭೀರ್ ವ್ಯಂಗ್ಯವಾಡಿದ್ದಾರೆ. ‘ಕಾಶ್ಮೀರ ಮತ್ತು ವಿಶ್ವಸಂಸ್ಥೆ ಬಗ್ಗೆ ಆಫ್ರಿದಿ ಅವರ ಟ್ವೀಟ್ ಬಗ್ಗೆ ಮಾಧ್ಯಮಗಳು ನನ್ನಲ್ಲಿ ಪ್ರತಿಕ್ರಿಯೆ ಕೇಳಿದವು. ಅದರಲ್ಲಿ ಹೇಳುವುದೇನಿದೆ? ಆಫ್ರಿದಿ ಅವರು ವಿಶ್ವಸಂಸ್ಥೆಯನ್ನು ಎದುರುನೋಡುತ್ತಿದ್ದಾರೆ. ಇದು ಅವರ ಅಂಡರ್‌ ನೈಂಟೀನ್ ವಯಸ್ಸಿನ ಯೋಚನೆ. ಮಾಧ್ಯಮಗಳು ನಿರಾಳರಾಗಬಹುದು. ನೋಬಾಲ್ ಮನವಿ ತಿರಸ್ಕರಿಸಿದ್ದನ್ನು ಶಾಹೀದ್ ಆಫ್ರಿದಿ ಸಂಭ್ರಮಿಸುತ್ತಿದ್ದಾರೆ!!!’ ಎಂದು ಗಂಭೀರ್ ಟ್ವೀಟ್ ಮಾಡಿದ್ದಾರೆ.       

short by NP / read more at Prajavani

Comments