Skip to main content


ಡಾ. ರಾಜ್ಕುಮಾರ್ ಹಾಡಿನ ಮೂಲಕ ಕನ್ನಡಿಗರ ಮನ ಗೆದ್ದ ಖ್ಯಾತ ಕ್ರಿಕೆಟಿಗ ಎಬಿಡಿ ವಿಲಿಯರ್ಸ್

ಐಪಿಎಲ್ ಪ್ರಾರಂಭವಾಗಿ ಎರಡು ವಾರ ಕಳೆದಿದ್ದು, ಕ್ರಿಕೆಟ್ ಅಭಿಮಾನಿಗಳು ಮನರಂಜನೆಯ ರಸದೌತಣದಲ್ಲಿ ಮಿಂದೆಳುತ್ತಿದ್ದಾರೆ. ಈ ನಡುವೆ ಆರ್.ಸಿ.ಬಿ ಪರ ಆಡುತ್ತಿರುವ ವಿಶ್ವ ಖ್ಯಾತ ಬ್ಯಾಟ್ಸ್ ಮನ್ ಎಬಿಡಿ ವಿಲಿಯರ್ಸ್ ಗೆ ರಾಜ್ಯದಲ್ಲಿ ಅಭಿಮಾನಿಗಳು ತುಸು ಹೆಚ್ಚಾಗಿಯೇ ಇದ್ದಾರೆ. ಒಂದಲ್ಲಾ ಒಂದು ಕಾರಣಕ್ಕೆ ಎಬಿಡಿ ವಿಲಿಯರ್ಸ್ ರನ್ನ ಕ್ರಿಕೆಟ್ ಅಭಿಮಾನಿಗಳು ಇಷ್ಟಪಡುತ್ತಾರೆ.ಇದೀಗ ಎಬಿಡಿ ವಿಲಿಯರ್ಸ್ ಕನ್ನಡದ ಕಣ್ಮಣಿ ನಟ ಸಾರ್ವಭೌಮ ಡಾ. ರಾಜ್ ಕುಮಾರ್ ಅವರ "ಬಾನಿಗೊಂದು ಎಲ್ಲೇ ಎಲ್ಲಿದೆ.. ನಿನ್ನಾಸೆಗೆಲ್ಲಿ ಕೊನೆ ಇದೆ.." ಏಕೆ ಕನಸು ಕಾಣುವೆ, ನಿಧಾನಿಸು ನಿಧಾನಿಸು ಎಂದು ಪ್ರೇಮದ ಕಾಣಿಕೆ ಚಿತ್ರದ ಈ ಹಾಡನ್ನ ಮೌತ್ ಹರ್ಗನ್ ನಲ್ಲಿ ಎಬಿಡಿ ವಿಲಿಯರ್ಸ್ ಸುಮದುರವಾಗಿ ನುಡಿಸಿ ಎಲ್ಲರ ಅಭಿಮಾನಕ್ಕೆ ಪಾತ್ರರಾಗಿದ್ದಾರೆ.

short by NP / read more at Troll Anthammas

Comments