Skip to main content


ರಕ್ಷಣಾ ಸಚಿವಾಲಯದ ವೆಬ್‍ಸೈಟ್ ಹ್ಯಾಕ್ !

ಭಾರತದ ರಕ್ಷಣಾ ಸಚಿವಾಲಯದ ಅಧಿಕೃತ ವೆಬ್‍ಸೈಟ್ ಹ್ಯಾಕ್ ಆಗಿದ್ದು, ವೆಬ್‍ಸೈಟ್‍ನ ಮುಖಪುಟದಲ್ಲಿ “The website encountered an unexpected error. Please try again later” ಎಂಬ ಸಂದೇಶ ಕಾಣುತ್ತಿದೆ. ಚೀನಾ ಹ್ಯಾಕರ್‍‍ಗಳು ಈ ಕೃತ್ಯ ಎಸಗಿದ್ದಾರೆ ಎಂದು ಶಂಕಿಸಲಾಗಿದೆ. ಭಾರತ ಸರ್ಕಾರದ ಅಧಿಕೃತ ವೆಬ್‍ಸೈಟ್‍ಗಳು ಹ್ಯಾಕ್ ಆಗುತ್ತಿರುವುದು ಇದೇ ಮೊದಲ ಬಾರಿ ಏನೂ ಅಲ್ಲ, ಕಳೆದ ವರ್ಷ ಸೈಬರ್ ದಾಳಿ ನಡೆದಾಗ ಗೃಹ ಸಚಿವಾಲಯದ ವೆಬ್‍ಸೈಟ್‍ನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು.       

short by NP / read more at Prajavani