Skip to main content


ವಿಶ್ವಕಪ್‌ ಗೆದ್ದ ಏಳನೇ ವಾರ್ಷಿಕೋತ್ಸವದ ದಿನ ಪದ್ಮಭೂಷಣ ಪ್ರಶಸ್ತಿ ಪಡೆದ ಧೋನಿ

ಭಾರತ ಕ್ರಿಕೆಟ್‌ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್‌ ಧೋನಿ ಹಾಗೂ ವಿಶ್ವ ಸ್ನೂಕರ್‌ ಚಾಂಪಿಯನ್‌ ಪಂಕಜ್‌ ಆಡ್ವಾಣಿಗೆ ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಸಲಾಯಿತು. ಸೋಮವಾರ ಸಂಜೆ ರಾಷ್ಟ್ರಪತಿ ಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ ಉಭಯರಿಗೂ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಿದರು. ಮಹೇಂದ್ರ ಸಿಂಗ್‌ ಧೋನಿಗೆ ಇದು ವಿಶೇಷ ದಿನ. ಏಳು ವರ್ಷಗಳ ಹಿಂದೆ ಇದೇ ದಿನ ಅಂದರೆ ಏಪ್ರಿಲ್‌ 2, 2011ರಂದು ಧೋನಿ ಭಾರತಕ್ಕೆ ವಿಶ್ವಕಪ್‌ ಕ್ರಿಕೆಟ್‌ ಟ್ರೋಫಿ ದೊರಕಿಸಿಕೊಟ್ಟಿದ್ದರು. ವಿಶ್ವಕಪ್‌ ಗೆದ್ದ ನಂತರ ನವೆಂಬರ್‌ 1, 2011ರಂದು ಧೋನಿಗೆ ಸೇನೆಯಿಂದ ಗೌರವ ಲೆಫ್ಟಿನೆಂಟ್‌ ಕರ್ನಲ್‌ ಗೌರವ ನೀಡಿತ್ತು. ಪಂಕಜ್‌ ಆಡ್ವಾಣಿ ಕೂಡ ಪದ್ಮಭೂಷಣ ಪ್ರಶಸ್ತಿ ಸ್ವೀಕರಿಸಿದರು. 

short by Pawan / read more at Vijay Karnataka

Comments