Skip to main content


"ಕುರುಕ್ಷೇತ್ರ" ಸಿನಿಮಾ ಬಗ್ಗೆ ಇತ್ತೀಚಿನ ಅಪ್ಡೇಟ್ ಇಲ್ಲಿದೆ..

ಚಾಲೆಂಜಿಂಗ್ ಸ್ಟಾರ್ ಅಭಿನಯದ ಕುರುಕ್ಷೇತ್ರ ಸಿನಿಮಾ ಚಿತ್ರೀಕರಣ ಮುಗಿಸಿ ಸಾಕಷ್ಟು ದಿನಗಳು ಕಳೆದಿವೆ. ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಸಿನಿಮಾತಂಡ ಬ್ಯುಸಿ ಆಗಿದ್ದು ಇತ್ತ ಚುನಾವಣೆ ಹತ್ತಿರ ಬಂದಿರುವುದರಿಂದ ಚಿತ್ರದ ಅಪ್ಡೇಟ್ ಯಾರಿಗೂ ಸಿಕ್ಕಿಲ್ಲ. ಆರಂಭದಲ್ಲಿ ಚುನಾವಣೆಗೂ ಮುನ್ನವೇ ಸಿನಿಮಾವನ್ನ ಬಿಡುಗಡೆ ಮಾಡುವುದಾಗಿ ಚಿತ್ರತಂಡ ಹೇಳಿಕೊಂಡಿತ್ತು.ನಂತರ ಸಿನಿಮಾವನ್ನ ಥ್ರೀಡಿಯಲ್ಲಿ ಚಿತ್ರೀಕರಣ ಮಾಡಲು ನಿರ್ಧಾರ ಮಾಡಿದ ನಂತರ ಚಿತ್ರೀಕರಣಕ್ಕಾಗಿಯೇ ಹೆಚ್ಚಿನ ಸಮಯವನ್ನ ಕೊಡಬೇಕಾಯಿತು. ಇನ್ನು ಸಿನಿಮಾ ನಿರ್ಮಾಪಕರು ರಾಜಕೀಯದಲ್ಲಿ ಗುರುತಿಸಿಕೊಂಡಿರುವ ಹಿನ್ನಲೆಯಲ್ಲಿ ಸದ್ಯ ರಾಜಕೀಯ ಮತ್ತು ಸಿನಿಮಾ ಎರಡರಲ್ಲಿಯೂ ಹೆಚ್ಚಿನ ಗಮನ ಹರಿಸಬೇಕಾಗಿದೆ.ಕುರುಕ್ಷೇತ್ರ ಸಿನಿಮಾದ ಆಡಿಯೋ ರಿಲೀಸ್ ಇದೇ ತಿಂಗಳ 28 ರಂದು ನಡೆಯಬೇಕಾಗಿತ್ತು. ಆದರೆ ಚುನಾವಣೆ ನೀತಿ ಸಂಹಿತೆ ಇರುವುದರಿಂದ ಸಿನಿಮಾತಂಡ ಚುನಾವಣೆ ಮುಗಿಸಿಕೊಂಡು ಅದ್ದೂರಿ ಆಗಿ ಆಡಿಯೋ ಬಿಡುಗಡೆ ಸಮಾರಂಭ ಮಾಡಲು ನಿರ್ಧಾರ ಮಾಡಿದೆ.

short by: Nithin

Comments