Skip to main content


ನಡು ರಸ್ತೆಯಲ್ಲಿ ಬಿಜೆಪಿ ಟಿಕೆಟ್ ಆಕಾಂಕ್ಷಿಯ ಕಾರು ಧಗ ಧಗ!

ಬಿಜೆಪಿ ಮುಖಂಡ ಡಾ. ಶರಣ ಭೂಪಲಾರೆಡ್ಡಿ ಅವರು ತಮ್ಮ ಕಾರಿಲ್ಲಿ ಪ್ರಯಾಣಿಸುವಾಗ ಆಕಸ್ಮಿಕ ಬೆಂಕಿ ಕಾಣಿಸಿಕೊಂಡ ಘಟನೆಯು ಶಹಾಪುರ ಹೊರವಲಯದ ಸೀಮೆ ಮಾರಮ್ಮ ದೇವಸ್ಥಾನ ಬಳಿ ನಡೆದಿದೆ. ಕ್ಷೇತ್ರದ ಪ್ರಬಲ ಬಿಜೆಪಿ ಪಕ್ಷದ ಟಿಕೆಟ್ ಆಕಾಂಕ್ಷಿಯಾಗಿರುವ ಡಾ.ಶರಣಭೂಪಲಾರೆಡ್ಡಿ ಹೊಸದಾಗಿ ಖರೀದಿಸಿದ್ದ ಫೋರ್ಡ್ ಎಂಡೆವರ್ ಕಾರಿನಲ್ಲಿ ಮನೆಯಿಂದ ದೇವಾಲಯಕ್ಕೆ ತೆರಳುವ ವೇಳೆ ಈ ಘಟನೆ ಸಂಭವಿಸಿದೆ. ಕಾರಿನ ಎಂಜಿನ್ ನಲ್ಲಿನ ತಾಂತ್ರಿಕ ದೋಷದಿಂದಾಗಿ ಬೆಂಕಿ ಹೊತ್ತಿಕೊಂಡಿದೆ ಎನ್ನುವ ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ.       
   
short by NP / read more at Public TV