Skip to main content


ಕಲ್ಲಡ್ಕ ಭಟ್‌ ದೈವ ಭೂತದ ಅಸ್ತಿತ್ವವನ್ನೇ ಪ್ರಶ್ನಿಸಿದ್ದಾರೆ: ಸಚಿವ ರೈ

'ಕಲ್ಲಡ್ಕ ಪ್ರಭಾಕರ್ ಭಟ್  ಕರಾವಳಿಯ ದೈವ ಭೂತದ‌ ಅಸ್ತಿತ್ವ ಪ್ರಶ್ನೆ ಮಾಡಿದ್ದಾರೆ' ಎಂದು ಸಚಿವ ರಮನಾಥ್‌ ರೈ ಕಿಡಿ ಕಾರಿದ್ದಾರೆ. 

 ಮಂಗಳೂರಿನಲ್ಲಿ ಮಂಗಳವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ  ಸಚಿವ ರೈ ಕಲ್ಲಡ್ಕ ಪ್ರಭಾಕರ್ ಭಟ್ ಅವರ ಸಚಿವ ಖಾದರ್‌ ವಿರುದ್ಧದ ಹೇಳಿಕೆಗೆ ಆಕ್ರೋಶ ಹೊರ ಹಾಕಿದರು. 

'ಪ್ರಸಾದ ಕೊಡುವ ಭೂತ ಕಟ್ಟುವವನಿಗೆ ತಲೆ ಸರಿ ಇಲ್ಲ ಅಂದಿದ್ದಾರೆ. ಆದರೆ ಪ್ರಸಾದ ಕೊಡುವುದು ಭೂತ ಕಟ್ಟುವವನಲ್ಲ,ನಮ್ಮ ನಂಬಿಕೆ ಪ್ರಸಾದ ಕೊಡುವುದು ದೈವಗಳು. ಭಟ್‌ ಹೇಳಿಕೆ ದೈವಕ್ಕೆ ತಲೆ ಸರಿಯಿಲ್ಲ ಎಂದಂತಾಗಿದೆ. ಹಿಂದುತ್ವವಾದಿ ಎಂದು ಹೇಳಿಕೊಂಡು ಭೂತದ ಅಸ್ತಿತ್ವವನ್ನೇ  ಭಟ್‌  ಪ್ರಶ್ನೆ ಮಾಡಿದ್ದಾರೆ' ಎಂದರು.             

short by NP/ read more at Udayavani

Comments