Skip to main content


ಸಿಲ್ಕ್ ಬೋರ್ಡ್ ಟ್ರಾಫಿಕ್ ನಲ್ಲಿ ಆದ ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ

ಬೆಂಗಳೂರು ಟ್ರಾಫಿಕ್ ಮಯವಾಗಿದೆ. ಬೆಳ್ಳಗೆ ಎದ್ದು ಎಲ್ಲಿಗಾದರು ಹೋಗಬೇಕು ಅಂದರೆ ಉದ್ದದ ಟ್ರಾಫಿಕ್ ಜಾಮ್ ನೆನಪಾಗುತ್ತದೆ. ಅದರಲ್ಲಿಯೂ ಸಿಲ್ಕ್ ಬೋರ್ಡ್ ಟ್ರಾಫಿಕ್ ಜಾಮ್ ನಲ್ಲಿ ಇಡೀ ಬೆಂಗಳೂರಿಗೆ ಫೇಮಸ್ ಆಗಿದೆ. ಪ್ರತಿದಿನ ಸಿಲ್ಕ್ ಬೋರ್ಡ್ ಸಿಗ್ನಲ್ ದಾಟುವುದು ಅಂದರೆ ಒಂದು ಯುದ್ಧ ಗೆದ್ದಂತೆ. ಆದರೆ ಅದೇ ಸಿಲ್ಕ್ ಬೋರ್ಡ್ ಟ್ರಾಫಿಕ್ ಈಗ ಇಬ್ಬರು ಪ್ರೇಮಿಗಳನ್ನು ಒಂದು ಮಾಡಿದೆ. ಕನ್ನಡದಲ್ಲಿ ಇದೀಗ ಒಂದು ಹೊಸ ಕಿರುಚಿತ್ರ ಬಿಡುಗಡೆಯಾಗಿದೆ. 'ಸಿಲ್ಕ್ ಬೋರ್ಡ್' ಎಂಬ ಈ ಶಾರ್ಟ್ ಫಿಲ್ಮ್ ಗೆ ಯೂಟ್ಯೂಬ್ ನಲ್ಲಿ ದೊಡ್ಡ ಪ್ರತಿಕ್ರಿಯೆ ವ್ಯಕ್ತವಾಗಿದೆ. 2 ಲಕ್ಷಕ್ಕೂ ಅಧಿಕ ಜನರು ಇದನ್ನು ನೋಡಿದ್ದಾರೆ.

short by Pawan / read more at Filmibeat

Comments