Skip to main content


ಮತ್ತೆ ಒಂದಾದ ವಿಕ್ಟರಿ ಜೋಡಿ

"ಕಾಲೇಜ್‌ ಕುಮಾರ್‌' ಚಿತ್ರದ ನಂತರ ನಿರ್ದೇಶಕ ಸಂತು, ಶರಣ್‌ಗೆ ಸಿನಿಮಾ ಮಾಡುತ್ತಿರುವ ವಿಚಾರ ನಿಮಗೆ ಗೊತ್ತೇ ಇದೆ. ಈಗಾಗಲೇ ಸದ್ದಿಲ್ಲದೇ ಚಿತ್ರೀಕರಣ ಕೂಡಾ ಶುರುವಾಗಿದೆ. ಚಿತ್ರಕ್ಕೆ ನಾಯಕಿ ಯಾರು ಎಂಬ ಕುತೂಹಲ ಅನೇಕರಲ್ಲಿತ್ತು. ಈಗ ಅದಕ್ಕೆ ಉತ್ತರ ಸಿಕ್ಕಿದೆ. ಅದು ಅಸ್ಮಿತಾ ಸೂದ್. ನೀವು ಶರಣ್‌ ಅವರ "ವಿಕ್ಟರಿ' ಸಿನಿಮಾ ನೋಡಿದ್ದರೆ ಅಲ್ಲಿಗೆ ನಿಮಗೆ ಅಸ್ಮಿತಾ ಸೂದ್‌ ಕಾಣಸಿಗುತ್ತಾರೆ. ಆ ನಂತರ "ಅಧ್ಯಕ್ಷ' ಸಿನಿಮಾದ ಕಲ್ಯಾಣಿ ಟೀಚರ್‌ ಪಾತ್ರವನ್ನು ನೀವು ನೆನಪು ಮಾಡಿಕೊಳ್ಳಬಹುದು. ಈ ಚಿತ್ರವನ್ನು ತರುಣ್‌ ಶಿವಪ್ಪ ನಿರ್ಮಿಸುತ್ತಿದ್ದು, ಸಂತು ನಿರ್ದೇಶನ ಮಾಡುತ್ತಿದ್ದಾರೆ. ಚಿತ್ರಕ್ಕೆ ತರುಣ್‌ ಸುಧೀರ್‌ ಅವರ ಕಥೆ ಇದೆ. ಬಹುತೇಕ "ವಿಕ್ಟರಿ' ತಂಡವೇ ಇಲ್ಲೂ ಮುಂದುವರೆಯಲಿದೆ. ಇದು ಕೂಡಾ ಔಟ್‌ ಅಂಡ್‌ ಔಟ್‌ ಕಾಮಿಡಿ ಸಿನಿಮಾವಾಗಿದ್ದು, ಚಿತ್ರದ ಟೈಟಲ್‌ ಇನ್ನಷ್ಟೇ ಅಂತಿಮವಾಗಬೇಕಿದೆ.     

short by Pawan / read more at Udayavani

Comments