Skip to main content


ತ್ರಿವರ್ಣ ಧ್ವಜ ಹಿಡಿದು ಭಾರತ ತಂಡವನ್ನು ಮುನ್ನಡೆಸಿದ ಸಿಂಧು

2018ರ ಕಾಮನ್ ವೆಲ್ತ್‌ ಕ್ರೀಡಾಕೂಟಕ್ಕೆ ಬುಧವಾರ ವರ್ಣರಂಜಿತ ಚಾಲನೆ ನೀಡಲಾಗಿದ್ದು, ರಿಯೊ ಒಲಿಂಪಿಕ್‌ ಬೆಳ್ಳಿ ಪದಕ ವಿಜೇತೆ ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧು ಅವರು ತ್ರಿವರ್ಣ ದ್ವಜ ಹಿಡಿದು ಭಾರತ ತಂಡವನ್ನು ಮುನ್ನಡೆಸಿದರು.ಕಾಮನ್ ವೆಲ್ತ್‌ ಗೇಮ್ಸ್ ನ 21ನೇ ಆವೃತ್ತಿಗೆ ಇಂದು ಆಸ್ಪ್ರೇಲಿಯಾದ ಗೋಲ್ಡ್‌ ಕೋಸ್ಟ್ ನ ಕರಾರ ಕ್ರೀಡಾಂಗಣದಲ್ಲಿ ಸ್ಥಳೀಯ ಸಂಪ್ರದಾಯಗಳ ಪ್ರಕಾರ ಚಾಲನೆ ನೀಡಲಾಯಿತು.ಇದೇ ಮೊದಲ ಬಾರಿ ಭಾರತದ ಮಹಿಳೆಯರ ಸಾಂಪ್ರದಾಯಿಕ ಉಡುಗೆ ಸೀರೆಗೆ ಕೊಕ್‌ ನೀಡಲಾಗಿದ್ದು, ಮಹಿಳಾ ಕ್ರೀಡಾಪಟುಗಳೂ ಕೂಡ ಸೂಟ್‌ ಧರಿಸಿ ಹೆಜ್ಜೆ ಹಾಕಿದರು.

short by: Nithin / read more at  KannadaPrabha

Comments