Skip to main content


ಕಾಂಗ್ರೆಸ್ ಮೂರನೇ ಸ್ಥಾನಕ್ಕೆ ಕುಸಿಯುತ್ತದೆ: ಹೆಚ್​ಡಿಕೆ ಭವಿಷ್ಯ

ಕಾಂಗ್ರೆಸ್ ಪಕ್ಷ ಈ ಬಾರಿ 130ಕ್ಕಿಂತ ಹೆಚ್ಚು ಸ್ಥಾನಗಳನ್ನು ಗೆಲ್ಲುತ್ತದೆ ಎಂದು ಹೇಳುತ್ತಿರುವ ಸಿಎಂ ಸಿದ್ದರಾಮಯ್ಯಗೆ ಮಾಜಿ ಸಿಎಂ ಹೆಚ್​ಡಿ ಕುಮಾರಸ್ವಾಮಿ ತಿರುಗೇಟು ಕೊಟ್ಟಿದ್ದಾರೆ. ರಾಜ್ಯಾದ್ಯಂತ ಸುತ್ತಾಡಿ ತಾನು ಜನರ ಅಭಿಪ್ರಾಯ ಕೇಳುತ್ತಿದ್ಧೇನೆ. ಅದರಂತೆ, ಈ ಬಾರಿಯ ಚುನಾವಣೆಯಲ್ಲಿ ಜಾತ್ಯತೀತ ಜನತಾ ದಳವೇ ಬಹುಮತ ಪಡೆಯುತ್ತದೆ. ಕಾಂಗ್ರೆಸ್ ಪಕ್ಷ ಮೂರನೇ ಸ್ಥಾನಕ್ಕೆ ಕುಸಿಯುತ್ತದೆ ಎಂದು ಕುಮಾರಸ್ವಾಮಿ ಭವಿಷ್ಯ ಹೇಳಿದ್ದಾರೆ. ಸಿದ್ದರಾಮಯ್ಯಗೆ ಕಾಂಗ್ರೆಸ್ 25 ಸ್ಥಾನಕ್ಕೆ ಇಳಿಯುತ್ತೆಂದು ರಾತ್ರಿಯ ಕನಸಿನಲ್ಲಿ ಬರುತ್ತದೆ. ಬೆಳಗ್ಗೆ ಎದ್ದು, ಅದನ್ನು ಜೆಡಿಎಸ್ ತಲೆ ಮೇಲೆ ಹಾಕುತ್ತಾರೆ. ಅದು ಅವರ ಉದಾಸೀನ ಅಲ್ಲ. ಅವರಿಗೆ ಜೆಡಿಎಸ್ ಕಂಡರೆ ಭಯ ಇದೆ. ಅದಕ್ಕೆ ಯಾವಾಗಲೂ ಅವರು ಜೆಡಿಎಸ್​ಗೆ 25 ಸ್ಥಾನ ಬರುತ್ತದೆ ಎಂದು ಹೇಳುತ್ತಲೇ ಇರುತ್ತಾರೆ ಎಂದು ಕುಮಾರಸ್ವಾಮಿ ವ್ಯಂಗ್ಯ ಮಾಡಿದ್ದಾರೆ.        

short by NP / read more at News18 Kannada


Comments