Skip to main content


ಮೇಘನಾ-ಚಿರುಗೆ ಎರಡೆರಡು ಮದುವೆ..!

ಚಿರಂಜೀವಿ ಸರ್ಜಾ ಮತ್ತು ಮೇಘನಾ ರಾಜ್ ಸಪ್ತಪದಿ ತುಳಿಯುತ್ತಿದ್ದಾರೆ. ಮದುವೆ ಇರೋದು ಮೇ 2ನೇ ತಾರೀಕು. ಮೇಘನಾ ಅವರ ತಂದೆ ಸುಂದರ್ ರಾಜ್ ಹಿಂದೂ. ತಾಯಿ ಪ್ರಮೀಳಾ ಜೋಷಾಯ್ ಕ್ಯಾಥೊಲಿಕ್ ಕ್ರಿಶ್ಚಿಯನ್. ಹೀಗಾಗಿ ಎರಡೂ ಸಂಪ್ರದಾಯಗಳಲ್ಲಿ ಮದುವೆ ನಡೆಯಲಿದೆ. ಮೇಘನಾ ಮನೆಯಲ್ಲಿ ಈಗಾಗಲೇ ಅರಿಶಿಣ ಮತ್ತು ಚಪ್ಪರ ಶಾಸ್ತ್ರ ಮುಗಿದಿದೆ.  27ನೇ ತಾರೀಕು ಚಿರಂಜೀವಿ ಸರ್ಜಾ ಮನೆಯಲ್ಲಿ ಚಪ್ಪರ ಶಾಸ್ತ್ರ. ಇದಾದ ಮೇಲೆ ಮದುವೆ.ಏಪ್ರಿಲ್ 29ನೇ ತಾರೀಕು ಅಂದ್ರೆ ಭಾನುವಾರ ಕೋರಮಂಗಲದ ಚರ್ಚ್‍ನಲ್ಲಿ ಚಿರಂಜೀವಿ ಸರ್ಜಾ ಮತ್ತು ಮೇಘನಾ ರಾಜ್ ಮದುವೆಯಾಗಲಿದ್ದಾರೆ. ಅದು ಕ್ರೈಸ್ತ ಸಂಪ್ರದಾಯದಂತೆ. ಭಾನುವಾರ ಸಂಜೆ 4 ಗಂಟೆಗೆ ಸೆಂಟ್ ಬೆಸಲಿಕಾ ಥೀಮ್‍ನಲ್ಲಿ ನಡೆಯುವ  ಕಾರ್ಯಕ್ರಮಕ್ಕೆ ಬಂಧುಗಳು ಹಾಗೂ ಆಪ್ತರಿಗಷ್ಟೇ ಆಹ್ವಾನ ನೀಡಲಾಗಿದೆ.ಇದಾದ ಮೇಲೆ ಏಪ್ರಿಲ್ 30ನೇ ತಾರೀಕು ಸಂಗೀತ್ ಕಾರ್ಯಕ್ರಮ ಇದೆ. ಅದಾದ ಮೇಲೆ ಮೇ 1ಕ್ಕೆ ವರಪೂಜೆ. ಮೇ 2ಕ್ಕೆ ಮದುವೆ. ಬೆಳಗ್ಗೆ 10.30ರ ಮುಹೂರ್ತದಲ್ಲಿ ಮೇಘನಾಗೆ ಚಿರು ಮಾಂಗಲ್ಯ ಧಾರಣೆ ಮಾಡಲಿದ್ದಾರೆ. ಅದು 2ನೇ ಮದುವೆ.

short by: Nithin / more at Chithraloka


Comments