Skip to main content


ಸಪ್ತಪದಿ ತುಳಿಯುತ್ತಿದ್ದ ವಧುವಿಗೆ ಪಾಗಲ್‌ ಪ್ರೇಮಿಯಿಂದ ಚಾಕುವಿನಿಂದ ದಾಳಿ

ಸಾಗರ ತಾಲೂಕಿನ ಭೀಮನಕೋಣೆ ಕಾಪ್ಟೆಮನೆಯಲ್ಲಿ ನಡೆಯುತ್ತಿದ್ದ ಮದುವೆಗೆ ಭೇಟಿ ನೀಡಿದ ಪಾಗಲ್‌ ಪ್ರೇಮಿಯೊಬ್ಬ ವಧುವಿನ ಮೇಲೆ ಚಾಕುವಿನಿಂದ ದಾಳಿ ನಡೆಸಿದ್ದಾನೆ. ವರನ ಭರತ್ ಎಂಬವರ ಜತೆ ಸೀತಾ(24) ಎಂಬಾಕೆಯ ಮದುವೆ ನಡೆಯುತ್ತಿತ್ತು. ತಾಳಿ ಕಟ್ಟಿದ ನಂತರ ಸಪ್ತಪದಿ ತುಳಿಯುತ್ತಿದ್ದಾಗಲೇ ಅಲ್ಲೇ ಇದ್ದ ಭಗ್ನ ಪ್ರೇಮಿ ಮದುಮಗಳ ಕುತ್ತಿಗೆಗೆ ಚಾಕುವಿನಿಂದ ಇರಿದಿದ್ದಾನೆ. ಈ ವೇಳೆ ತಪ್ಪಿಸಲು ಬಂದ ಹುಡುಗಿಯ ಚಿಕ್ಕಪ್ಪ ಗಂಗಾಧರಪ್ಪನ ಮೇಲೂ ಹಲ್ಲೆ ಮಾಡಿದ್ದಾನೆ. ಕೂಡಲೇ ಆರೋಪಿಯನ್ನು ಹಿಡಿದು ಪೋಲೀಸರಿಗೆ ಒಪ್ಪಿಸಲಾಗಿದೆ. 
short by Pawan / read more at Vijayavani