Skip to main content


ಇತಿಹಾಸದಲ್ಲೇ ಹೊಸ ಮೈಲಿಗಲ್ಲನ್ನು ನಿರ್ಮಿಸಿದ ರ‍್ಯಾಪರ್‌ ಚಂದನ್‌ ಶೆಟ್ಟಿಯ ‘ಟಕಿಲ’ ಸಾಂಗ್!

'ಟಕಿಲ' ಹಾಡು ಈಗ ಯೂಟ್ಯೂಬ್ ನಲ್ಲಿ ನಿರೀಕ್ಷೆಗೂ ಮೀರಿ ದೊಡ್ಡ ಮಟ್ಟದಲ್ಲಿ ರೆಸ್ಪಾನ್ಸ್ ಪಡೆದಿದೆ. ಬಿಗ್ ಬಾಸ್ ವೇದಿಕೆಯ ಮೇಲೆ ಕಿಚ್ಚ ಸುದೀಪ್ ಅವರ ಕೈಯಿಂದ ಲಾಂಚ್ ಆದ ಈ ಹಾಡು ರಿಲೀಸ್ ಆದ 17 ಗಂಟೆಯ ಒಳಗೆ ಒಂದು ಮಿಲಿಯನ್’ಗೂ ಹೆಚ್ಚು ಜನರು ವೀಕ್ಷಿಸಿದ್ದರು. ಇದೀಗ ಕೇವಲ ಮೂರೇ ತಿಂಗಳಿನಲ್ಲಿ 25 ಮಿಲಿಯನ್ ಅಂದರೆ ಎರಡೂವರೆ ಕೋಟಿಗೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. ಕನ್ನಡದ ಮಟ್ಟಿಗೆ ಅತಿವೇಗವಾಗಿ 25 ಮಿಲಿಯನ್ ವೀಕ್ಷಣೆಗಳನ್ನು ಪಡೆದ ಹಾಡು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದು ಹೊಸ ಮೈಲಿಗಳನ್ನು ನಿರ್ಮಿಸಿದೆ, ಈ ಹಾಡು ಈವರೆಗೆ 2.79 ಲಕ್ಷ ಲೈಕ್ಸ್ ಪಡೆದುಕೊಂಡಿದೆ.   

short by Pawan / read more at Arali Katte