Skip to main content


ವಿರೋಧ ಪಕ್ಷಗಳನ್ನು ನಾಯಿ, ಮುಂಗುಸಿಗೆ ಹೋಲಿಸಿದ ಶಾ

ಪಕ್ಷದ ಸಂಸ್ಥಾಪನಾ ದಿನಾಚರಣೆ ನಿಮಿತ್ತ ಹಮ್ಮಿಕೊಂಡಿದ್ದ ಬಿಜೆಪಿ ರ್‍ಯಾಲಿ ಉದ್ದೇಶಿಸಿ ಅವರು ಶುಕ್ರವಾರ ಇಲ್ಲಿ ಮಾತನಾಡಿದರು. ‘2019ರ ಚುನಾವಣೆಗೆ ಕ್ಷಣಗಣನೆ ಶುರುವಾಗಿದೆ. ಎದುರಾಳಿಗಳನ್ನು ಒಗ್ಗೂಡಿಸುವ ಯತ್ನ ನಡೆಯುತ್ತಿದೆ. ದೊಡ್ಡ ಪ್ರವಾಹ ಬಂದಾಗ ಎಲ್ಲವೂ ಕೊಚ್ಚಿಕೊಂಡು ಹೋಗುತ್ತವೆ. ಆದರೆ ಆಲದಮರ ಮಾತ್ರ ಉಳಿಯುತ್ತದೆ. ಜೀವ ಉಳಿಸಿಕೊಳ್ಳುವ ಸಲುವಾಗಿ ಹಾವು, ಮುಂಗುಸಿ, ನಾಯಿ, ಬೆಕ್ಕುಗಳು ಮರವನ್ನೇರುತ್ತವೆ’ ಎಂದು ಶಾ ಹೇಳಿದ್ದಾರೆ.
‘ಇಂತಹ ಹೇಳಿಕೆ ಖಂಡನೀಯ. ಅವರಿಂದ ಇನ್ನೇನನ್ನೂ ನಾವು ನಿರೀಕ್ಷಿಸಲು ಸಾಧ್ಯವಿಲ್ಲ’ ಎಂದು ಆನಂದ್‌ ಶರ್ಮಾ ಪ್ರತಿಕ್ರಿಯಿಸಿದ್ದಾರೆ.            

short by NP / read more at Prajavani

Comments