Skip to main content


ಕನ್ನಡದ ಟಾಪ್ ಹೀರೋ ಗೆ ಕ್ಷಮೆ ಕೇಳಿದ ರಾಣಾ ದಗ್ಗುಬಾಟಿ!

ಡಿ.ಬಾಸ್ ದರ್ಶನ್ ಗೆ ಕ್ಷಮೆ ಕೇಳಿದ ರಾಣಾ ದಗ್ಗುಬಾಟಿ ತೆಲುಗಿನ ರಾಣಾ ದಗ್ಗುಬಾಟಿ ಅವರು ನಮ್ಮ ಕನ್ನಡದ ದರ್ಶನ್ ಬಗ್ಗೆ ಮಾತನಾಡಿ, ಕೊನೆಗೆ ಕ್ಷಮೆಯನ್ನು ಕೇಳಿದ್ದಾರೆ. ಆದರೆ ಯ್ಯಾಕೆ ಏನು ಅಂತ ಹೇಳ್ತಿವಿ. ದರ್ಶನ್ ಅವರ 50 ನೇ ಚಿತ್ರ ಹಾಗೂ ಭಾರತದ ಬಹು ನಿರೀಕ್ಷಿತ ಕನ್ನಡದ ಚಿತ್ರ “ಕುರುಕ್ಷೇತ್ರ”. ಈಗ ಈ ಚಿತ್ರದ ಚಿತ್ರೀಕರಣ ಭರದಿಂದ ಸಾಗಿದ್ದು, ಅತೀ ಶೀಘ್ರದಲ್ಲಿಯೇ ಥಿಯೇಟರ್ ಅಂಗಳಕ್ಕೆ ಕಾಲಿಡಲು ತಯಾರಿ ನಡೆಸುತ್ತಿದೆ. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಈ ಚಿತ್ರದಲ್ಲಿ ರಾಣಾ ದಗ್ಗುಬಾಟಿಯವರೂ ಅಭಿನಯಿಸಬೇಕಿತ್ತು. ಆದರೆ ಆ ಸಮಯದಲ್ಲಿ ರಾಣಾ ಅವರು ‘ನಾನೇ ರಾಜಾ ನಾನೇ ಮಂತ್ರಿ’ ಚಿತ್ರದಲ್ಲಿ ಬ್ಯೂಸಿ ಹಾಗೂ ಡೇಟ್ ಹೊಂದಾಣಿಕೆ ಆಗದಿದ್ದ ಕಾರಣ ಕುರುಕ್ಷೇತ್ರ ಚಿತ್ರದಲ್ಲಿ ಅಭಿನಯಿಸಲು ಆಗಲಿಲ್ಲ ಎಂದಿದ್ದಾರೆ.        

short by Pawan / read more at Troll Anthammas