Skip to main content


IPL'ನಲ್ಲಿ ಮಿಂಚಲಿದ್ದಾಳೆ ಕಣ್ಸನ್ನೆ ಬೆಡಗಿ ಪ್ರಿಯಾ!

ರಾತ್ರೋರಾತ್ರಿ ಇಂಟರ್ನೆಟ್ ಮೂಲಕ ಕೋಟ್ಯಾಂತರ ಅಭಿಮಾನಿಗಳ ನಿದ್ರೆ ಕದ್ದ ಮಲೆಯಾಳಂ ನಟಿ ಪ್ರಿಯಾ ಪ್ರಕಾಶ್ ವಾರಿಯರ್. ಪ್ರಿಯಾ ಕಣ್ಸನ್ನೆಗೆ ಯುವಕರಿಂದ ಹಿಡಿದು ವೃದ್ಧರವರೆಗೆ ಎಲ್ಲರೂ ಫಿದಾ ಆಗಿದ್ದಾರೆ. ಮಲಯಾಳಂ ನಟಿ ಪ್ರಿಯಾ ಅಭಿಮಾನಿಗಳಿಗೆ ಈಗ ಖುಷಿ ಸುದ್ದಿಯೊಂದು ಕಾದಿದೆ. ಪ್ರಿಯಾ ಶೀಘ್ರವೇ ಐಪಿಎಲ್ ಭಾಗವಾಗಲಿದ್ದಾಳೆ.

ವಾಸ್ತವವಾಗಿ ಮಂಚ್ ಎಂಬ ಚಾಕೊಲೇಟ್ ಮುಂಬೈ ಇಂಡಿಯನ್ಸ್, ಕೊಲ್ಕತ್ತಾ ನೈಟ್ ರೈಡರ್ಸ್ ಹಾಗೂ ರಾಯಲ್ ಚಾಲೆಂಜ್ ಬೆಂಗಳೂರು ತಂಡವನ್ನು ತನ್ನ ಕ್ರಂಚ್ ಪಾಲುದಾರರನ್ನಾಗಿ ಮಾಡಿಕೊಂಡಿದೆ. ನೆಸ್ಲೆ ಬ್ರ್ಯಾಂಡ್ ನ ಒಂದು ಭಾಗವಾಗಿರುವ ಮಂಚ್ ನ ಪ್ರಚಾರಕ್ಕೆ ನೆಸ್ಲೆ ಮುಂದಾಗಿದೆ.

ಮಂಚ್ ಪ್ರಚಾರಕ್ಕಾಗಿ ನೆಸ್ಲೆ ಐಪಿಎಲ್ ನಲ್ಲಿ ಮೈಟಿ20 ಎಂಬ ವಿಶೇಷ ಪ್ರಚಾರ ಶುರು ಮಾಡಿದೆ.ಈ ವಿಚಾರ ಪ್ರಚಾರಕ್ಕಾಗಿ ಪ್ರಿಯಾ ಪ್ರಕಾಶ್ ಸಹಿ ಮಾಡಿದ್ದಾಳೆ ಎನ್ನಲಾಗಿದೆ. ಅಂದ್ರೆ ಐಪಿಎಲ್ ನಲ್ಲಿ ಪ್ರಸಾರವಾಗುವ ಮಂಚ್ ಜಾಹೀರಾತಿನಲ್ಲಿ ಪ್ರಿಯಾ ಕಾಣಿಸಿಕೊಳ್ಳಲಿದ್ದಾಳೆ.

 short by: Nithin / read more at Kannadadunia

Comments