Skip to main content


ಚೊಚ್ಚಲ ಮಗುವಿನ ನಿರೀಕ್ಷೆಯಲ್ಲಿ ಇಲಿಯಾನಾ?

ಗೋವಾ ಬ್ಯೂಟಿ ಇಲಿಯಾನಾ ತಾಯಿಯಾಗುತ್ತಿದ್ದಾರಾ? ಹೌದು ಎನ್ನುತ್ತಿವೆ ಬಾಲಿವುಡ್ ಮೂಲಗಳು. ಆಸ್ಟ್ರೇಲಿಯಾ ಮೂಲದ ಫೋಟೋಗ್ರಾಫರ್ ಆ್ಯಂಡ್ರೂ ನಿಬೋನ್‍ರನ್ನು ಇಲಿಯಾನಾ ಲವ್ ಮ್ಯಾರೇಜ್ ಮೂಲಕ ವರಿಸಿದ್ದು  ಈ ವಿಷಯವನ್ನು ಅವರು ನೇರವಾಗಿ ತಿಳಿಸದಿದ್ದರೂ ಸಾಮಾಜಿಕ ಮಾಧ್ಯಮಗಳಲ್ಲಿ ತನ್ನ ಪ್ರಿಯಕರನ ಜತೆಗಿನ ಫೋಟೋಗಳನ್ನು ಪೋಸ್ಟ್ ಮಾಡಿ 'ಹಬ್ಬಿ' (ಗಂಡ) ಎಂದು ಸಂಭೋದಿಸಿದ್ದರು.ಆದರೆ ಈಗ ಇಲಿಯಾನಾ ತಾಯಿ ಆಗುತ್ತಿದ್ದಾರೆಂಬ ಸುದ್ದಿ ಹರಿದಾಡುತ್ತಿದೆ. 'ರೇಡ್' ಚಿತ್ರದ ಪ್ರಚಾರದಲ್ಲಿ ಭಾಗಿಯಾಗಿರುವ ಇಲಿಯಾನಾ ತಾನು ಗರ್ಭಿಣಿ ಎಂಬ ಸಂಗತಿ ಮರೆಮಾಚಲು ತುಂಬಾ ಸಡಿಲವಾದ ಉಡುಪು ಧರಿಸಿದ್ದಾಗಿ ಬಿಟೌನ್ ಮೂಲಗಳು ಹೇಳಿವೆ.ಇದಿಷ್ಟೇ ಅಲ್ಲದೆ ಆ್ಯಂಡ್ರೂ ತನ್ನ ಇನ್‌ಸ್ಟಾಗ್ರಾಮ್‌ನಲ್ಲಿ ತನ್ನ ಪತ್ನಿಯ ಫೋಟೋವನ್ನು ಹಂಚಿಕೊಂಡಿದ್ದಾರೆ. ಫೋಟೋದಲ್ಲಿ ಇಲಿಯಾನಾ ಬಾತ್‌ಟಬ್‌ನಲ್ಲಿ ವಿಶ್ರಾಂತಿ ಪಡೆಯುತ್ತಾ ಕಾಫಿ ಸವಿಯುತ್ತಿರುವುದನ್ನು ಕಾಣಬಹುದು.

short by : Nithin / read more at Vijaya Karnataka

Comments