Skip to main content


ಬಾಲಿವುಡ್ ರಾಣಿ ದೀಪಿಕಾ ಚಿತ್ತ ಸಿನಿಮಾ ನಿರ್ಮಾಣದತ್ತ !

'ಐಶ್ವರ್ಯ' ಸಿನಿಮಾದ ಮೂಲಕ ಸ್ಯಾಂಡಲ್ ವುಡ್ ಪ್ರವೇಶಿಸಿದ ನಟಿ ದೀಪಿಕಾ ಪಡುಕೋಣೆ ನಂತರ ಬಾಲಿವುಡ್​ನಲ್ಲಿ ಹೆಸರು ಮಾಡಿದರು. ಅಲ್ಲದೇ ಹಾಲಿವುಡ್​ ನಲ್ಲೂ ಮಿಂಚು ಹರಿಸಿದರು. ಈಗ ಒಂದು ಹೆಜ್ಜೆ ಮುಂದೆ ಹೋಗಿ ಸಿನಿಮಾ ನಿರ್ಮಾಣದತ್ತ ಮನಸ್ಸು ಮಾಡಿದ್ದಾರೆ. ಹೌದು ದೀಪಿಕಾ ಪಡುಕೋಣೆ ಪ್ರೊಡಕ್ಷನ್ ಹೌಸ್ ಒಂದನ್ನು ತೆರೆಯಲು ನಿರ್ಧರಿಸಿದ್ದಾರೆ. ಇತ್ತೀಚೆಗೆ ಮುಂಬೈನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ದೀಪಿಕಾ ಈ ವಿಚಾರ ಹೇಳಿಕೊಂಡಿದ್ದಾರೆ. 'ನನಗೆ ಸಿನಿಮಾ ನಿರ್ಮಾಣ ಮಾಡಬೇಕೆಂಬ ಆಸೆ ಇದೆ ಎಂದು ಹೇಳಿಕೊಂಡಿದ್ದಾರೆ. ಆದರೆ ಅವರು ಯಾವ ತೆರನಾದ ಚಿತ್ರಗಳನ್ನು ನಿರ್ಮಾಣ ಮಾಡಲಿದ್ದಾರೆ ಎಂಬ ಬಗ್ಗೆ ಇನ್ನೂ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.   

short by Pawan / read more at Kannada News Now