Skip to main content


ಬಿಗ್ ಬ್ರೇಕಿಂಗ್: ವರುಣಾದಲ್ಲಿ ಬಿಜೆಪಿಯಿಂದ ವಿಜಯೇಂದ್ರ ಸ್ಪರ್ಧೆ ಇಲ್ಲ! ಯಡಿಯೂರಪ್ಪ ಅಚ್ಚರಿ ಹೇಳಿಕೆ!

ವರುಣಾದಲ್ಲಿ ಬಿಜೆಪಿಯಿಂದ ವಿಜೆಯೇಂದ್ರ ಸ್ಪರ್ಧೆ ಇಲ್ಲ ಅಂತ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅಚ್ಚರಿಯ ಹೇಳಿಕೆ ನೀಡಿದ್ದಾರೆ. ಅವರು ಇಂದು ನಂಜನಗೂಡಿನಲ್ಲಿ ನಡೆದ ಸಮಾವೇಶದಲ್ಲಿ ಯಡಿಯೂರಪ್ಪ ಸ್ಪಷ್ಟನೆ ನೀಡಿದ್ದಾರೆ. ಇದೇ ವೇಳೆ ಅವರು ಸಮಾವೇಶದಲ್ಲಿ ಮಾತನಾಡುತ್ತ, ಸಾಮಾನ್ಯ ಕಾರ್ಯಕರ್ತ ಬಿಜೆಪಿಯಿಂದ ವರುಣಾದಲ್ಲಿ ಸ್ಪರ್ಧೆ ನಡೆಸಲಿದ್ದಾರೆ ಎಂದು ಸ್ಪಷ್ಟನೆ ನೀಡಿದ್ದಾರೆ. ಯಡಿಯೂರಪ್ಪ ವಿಜಯೇಂದ್ರ ಸ್ಪರ್ಧೆ ಮಾಡುವುದಿಲ್ಲ ಎಂದ ತಕ್ಷಣ, ನಂಜನಗೂಡು ಸಮಾವೇಶದಲ್ಲಿ ಗಲಾಟೆ, ಘರ್ಷಣೆ, ಕುರ್ಚಿ ಪುಡಿ ಪುಡಿ ಮಾಡುವ ಮೂಲಕ ತಮ್ಮ ಆಕ್ರೋಶ ವ್ಯಕ್ತ ಪಡಿಸುತ್ತಿದ್ದಾರೆ.. ಇದೀಗ ಸ್ಥಳದಲ್ಲಿ ಬಿಗುವಿನ ವಾತಾವರಣದಿಂದ ಕೂಡಿದೆ. 

short by Shraman / more at Kannadanewsnow


Comments