Skip to main content


ಐಪಿಎಲ್ ಚಿಯರ್ ಲೀಡರ್ಸ್ ಪಡೆಯೋ ಸಂಬಳವೆಷ್ಟು ಗೊತ್ತಾ?!

ಐಪಿಎಲ್ ನಲ್ಲಿ ಸಾಕಷ್ಟು ಆಕರ್ಷಕ ವಿಷಯಗಳಿವೆ. ಅವುಗಳಲ್ಲಿ ಚಿಯರ್ ಗರ್ಲ್ಸ್ ಎಂಬ ಅಂಶವು ಒಂದು. ಹೌದು, ಪಂದ್ಯದಲ್ಲಿ ಬೌಂಡರಿ ಬಾರಿಸಿದಾಗ ಅಥವಾ ವಿಕೆಟ್ ಆದಾಗ ತುಂಡು ತುಂಡು ಬಟ್ಟೆಯನ್ನು ತೊಟ್ಟುಕೊಂಡು ಡಾನ್ಸ್ ಮಾಡುವುದರ ಮೂಲಕ ಎಲ್ಲರನ್ನು ರಂಜಿಸುತ್ತಾ ಆಟಗಾರರನ್ನು ಪ್ರೇರೇಪಿಸುವ ಈ ಚಿಯರ್ ಗರ್ಲ್ಸ್ ಪಂದ್ಯದ ಮತ್ತೊಂದು ಆಕರ್ಷಕ ವಿಷಯ. ಅಂದಹಾಗೆ ಈ ಚಿಯರ್ ಗರ್ಲ್ಸ್ ವಿದೇಶದಿಂದ ಬರುವ ಹೆಣ್ಣು ಮಕ್ಕಳು. ಈ ಚಿಯರ್ ಗರ್ಲ್ಸ್ ಗೆ ಒಂದು ಮ್ಯಾಚ್ ಗೆ ಇಂತಿಷ್ಟು ಎಂಬ ಹಣವನ್ನು ವೇತನವಾಗಿ ನೀಡಲಾಗುತ್ತದೆ. ಅಂದರೆ ಒಂದು ಮ್ಯಾಚ್ ಮುಗಿದ ನಂತರ ಆ ಚಿಯರ್ ಗರ್ಲ್ಸ್ ಗೆ ಸಿಗುವ ಮೊತ್ತ 6,000 ದಿಂದ 12,000  ರೂಪಾಯಿಗಳು. ಹಾಗೂ ಪಂದ್ಯ ಗೆದ್ದರೆ ಚಿಯರ್ ಗರ್ಲ್ಸ್ ಗೆ ಬೋನಸ್ ಆಗಿ 3,000 ರುಪಾಯಿಗಳನ್ನು ಸಹ ನೀಡಲಾಗುತ್ತದೆ. ಇನ್ನು ಯಾವುದಾದರೂ ಫೋಟೊ ಶೂಟ್ ಅಥವಾ ಪಾರ್ಟಿ ಸಂದರ್ಭದಲ್ಲಿ ಭಾಗವಹಿಸಿದರೆ ಚಿಯರ್ ಗರ್ಲ್ಸ್ ಅವರಿಗೆ ಹೆಚ್ಚುವರಿ ಹಣವನ್ನು ಸಹ ನೀಡಲಾಗುವುದು ಎನ್ನುತ್ತವೆ ಮೂಲಗಳು.

short by Shraman / more at Troll Haida


Comments