Skip to main content


ಮಂಗಳೂರು: ಮುಖಾಮುಖಿ ಭೇಟಿಯಾದಾಗ ಪರಸ್ಪರ ಡೈಲಾಗ್ ಹೊಡೆದ ಬಿಜೆಪಿ-ಕಾಂಗ್ರೆಸ್ ಅಭ್ಯರ್ಥಿಗಳು!

ಸೋಮವಾರ ನಾಮಪತ್ರ ಸಲ್ಲಿಸಲಿರುವ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ, ಶಾಸಕ ಜೆ ಆರ್ ಲೋಬೊ ಮತ್ತು ಬಿಜೆಪಿ ಅಭ್ಯರ್ಥಿ ವೇದವ್ಯಾಸ ಕಾಮತ್ ಅವರು ರವಿವಾರ ಮಧ್ಯಾಹ್ನ ಸೂರ್ಯನಾರಾಯಣ ದೇವಸ್ಥಾನ ಮರೋಳಿಯಲ್ಲಿ ಮುಖಾಮುಖಿಯಾದರು. ದೇವಸ್ಥಾನದಿಂದ ಶಾಸಕ ಜೆ ಆರ್ ಲೋಬೊ ಹೊರಬರುತ್ತಿರುವ ವೇಳೆ ಬಿಜೆಪಿ ಅಭ್ಯರ್ಥಿ ವೇದವ್ಯಾಸ ಕಾಮತ್ ಆಗಮಿಸಿದ್ದಾರೆ. ಈ ಸಂದರ್ಭ ಕಾಂಗ್ರೆಸ್ ಅಭ್ಯರ್ಥಿ ಜೆ ಆರ್ ಲೋಬೊ ಬಳಿ ಬಂದಾಗ ಇಬ್ಬರು ಒಬ್ಬರಿಗೊಬ್ಬರು ಶುಭವಾಗಲಿ ಎಂದು ಹೇಳಿದರಾದರೂ ರಾಜಕೀಯ ಡೈಲಾಗ್ ಗಳು ಇಬ್ಬರ ನಡುವೆ ವಿನಿಮಯವಾಯಿತು. "ಅರ್ಜುನ ಶ್ರೀಕೃಷ್ಣನ ಬಳಿ ಆಶೀರ್ವಾದ ಪಡೆದಂತೆ ನಾನು ಮೊದಲೇ ಹೋಗಿ ವರ ಪಡೆದುಕೊಂಡು ಬಂದೆ. ಇನ್ನು ನೀವು ಶ್ರೀ ಕೃಷ್ಣನ ತಲೆಯ ಬಳಿಯೇ ಕೂರಬೇಕು" ಎಂದು ಕಾಂಗ್ರೆಸ್ ಅಭ್ಯರ್ಥಿ ಜೆ‌ ಆರ್ ಲೋಬೊ ಹೇಳಿದರೆ, "ಶ್ರೀ ಕೃಷ್ಣ ಪರಮಾತ್ಮನಿಗೆ ಯಾರಿಗೆ ಆಶೀರ್ವಾದ ನೀಡಬೇಕೆಂದು ಗೊತ್ತಿದೆ" ಎಂದು  ವೇದವ್ಯಾಸ ಕಾಮತ್ ಹೇಳಿ ನಕ್ಕರು. ಸೈದ್ಧಾಂತಿಕವಾಗಿ ಬೇರೆ ಬೇರೆಯಾಗಿದ್ದರೂ, ಮಂಗಳೂರಿನವರಾಗಿ ಒಂದಾಗಿ ಚುನಾವಣೆ ಎದುರಿಸುವ ಎಂದು ವೇದವ್ಯಾಸ ಕಾಮತ್ ಹೇಳಿದರು.       

short by Pawan / read more at Varthabharati 

Image Courtesy - Varthabharati

Comments