Skip to main content


ಕೊಹ್ಲಿ ಬಳಿಕ ಟೀಂ ಇಂಡಿಯಾ ಕ್ಯಾಪ್ಟನ್ ಯಾರಾಗಬೇಕು..?

ವಿರಾಟ್ ಕೊಹ್ಲಿ ಬಳಿಕ ಟೀಂ ಇಂಡಿಯಾವನ್ನು ಓರ್ವ ಬೌಲರ್ ಮುನ್ನಡೆಸಬೇಕು ಎಂದು ಮಾಜಿ ಕ್ರಿಕೆಟಿಗ ಹಾಗೂ ಕಿಂಗ್ಸ್ ಇಲೆವನ್ ಪಂಜಾಬ್ ತಂಡದ ಮೆಂಟರ್ ವಿರೇಂದ್ರ ಸೆಹ್ವಾಗ್ ಅಭಿಪ್ರಾಯಪಟ್ಟಿದ್ದಾರೆ. ನಾನು ಬೌಲರ್'ಗಳು ಕ್ಯಾಪ್ಟನ್ ಆಗಿರುವ ತಂಡದ ಬಹುದೊಡ್ಡ ಅಭಿಮಾನಿ. ನಾನು ಕಪಿಲ್ ದೇವ್, ಇಮ್ರಾನ್ ಖಾನ್, ವಾಸೀಂ ಅಕ್ರಂರಂತವರು ತಂಡವನ್ನು ಮುನ್ನಡೆಸಿದ್ದನ್ನು ನೋಡಿದ್ದೇನೆ. ಸಾಮಾನ್ಯವಾಗಿ ಭಾರತದಲ್ಲಿ ಬೌಲರ್'ಗಳು ಟೀಂ ಇಂಡಿಯಾವನ್ನು ಮುನ್ನಡೆಸಿದ್ದು ಕಡಿಮೆ. ಆದರೆ ವಿರಾಟ್ ಕೊಹ್ಲಿ ಬಳಿಕ ಕೆಲ ಬೌಲರ್'ಗಳು ಭಾರತ ತಂಡದ ನಾಯಕರಾಗಬಹುದು ಎಂದು ಭವಿಷ್ಯ ನುಡಿದಿದ್ದಾರೆ.   

short by Pawan / read more at Suvarna News