Skip to main content


ಮಾದ್ಯಮಗಳಿಗೆ ಮಸಾಲೆ ಕೊಡಬೇಡಿ: ಮೋದಿ ಎಚ್ಚರಿಕೆ

ಬಿಜೆಪಿ ನಾಯಕರು ಮತ್ತು ಸಂಸದರ ಜತೆ ಭಾನುವಾರ ವಿಡಿಯೊ ಕಾನ್ಫರೆನ್ಸ್‌ ಮೂಲಕ ಮಾತನಾಡಿದ ಅವರು, ವಿವಾದಾತ್ಮಕ ಹೇಳಿಕೆಗಳ ಮೂಲಕ ಮಾಧ್ಯಮಗಳಿಗೆ ಆಹಾರವಾಗಬೇಡಿ ಎಂದು ಬುದ್ಧಿಮಾತು ಹೇಳಿದ್ದಾರೆ. 'ಪ್ರತಿ ಬಾರಿಯೂ ಮಾಧ್ಯಮಗಳ ಮೇಲೆ ತಪ್ಪು ಹೊರಿಸುವುದು ಸರಿಯಲ್ಲ. ತಪ್ಪು ಮಾಡಿ ಮಾಧ್ಯಮಗಳಿಗೆ ಆಹಾರ, ಮಸಾಲೆ ಒದಗಿಸುವವರು ನಾವೇ ತಾನೇ' ಎಂದರು. 'ಎಲ್ಲ ವಿಷಯಗಳ ಬಗ್ಗೆಯೂ ಸಮಾಜ ವಿಜ್ಞಾನಿಗಳಂತೆ, ವಿಷಯ ತಜ್ಞರಂತೆ ನೀಡುವ ಅರೆಬೆಂದ ಹೇಳಿಕೆಗಳು ಮಾಧ್ಯಮಗಳಿಗೆ ಆಹಾರವಾಗುತ್ತವೆ. ಇದು ಮಾಧ್ಯಮಗಳ ತಪ್ಪಲ್ಲ. ನಮ್ಮ ಅಜ್ಞಾನ' ಎಂದು ಮೋದಿ ತರಾಟೆಗೆ ತೆಗೆದುಕೊಂಡಿದ್ದಾರೆ.           

short by NP / more at Prajavani

Comments