Skip to main content


ನೀರವ್‌ ಮೋದಿ ಬಂಧಿಸುವಂತೆ ಹಾಂಕಾಂಗ್‌ಗೆ ಭಾರತ ಆಗ್ರಹ

ಬ್ಯಾಂಕ್‌ಗೆ ವಂಚಿಸಿ ಪರಾರಿಯಾಗಿರುವ ಉದ್ಯಮಿ ನೀರವ್ ಮೋದಿಯನ್ನು ಬಂಧಿಸುವಂತೆ ಭಾರತವು ಹಾಂಕಾಂಗ್‌ಗೆ ಕೇಳಿಕೊಂಡಿದೆ. ನೀರವ್, ಚೀನಾದ ಆಡಳಿತಕ್ಕೊಳಪಟ್ಟ ಪ್ರದೇಶದಲ್ಲಿದ್ದಾರೆ ಎನ್ನಲಾಗಿದೆ. ಫೆಬ್ರುವರಿ ತಿಂಗಳಿನಿಂದ ಪೊಲೀಸರು ಶೋಧ ಆರಂಭಿಸಿದಾಗಿನಿಂದ ನೀರವ್ ಹಾಗೂ ಮತ್ತೊಬ್ಬ ಆರೋಪಿ ಮೆಹುಲ್ ಚೋಕ್ಸಿ ತಲೆಮರೆಸಿಕೊಂಡಿದ್ದಾರೆ. ಆರೋಪಿಗಳನ್ನು ಬಂಧಿಸುವಂತೆ ಹಾಂಕಾಂಗ್‌ ಸರ್ಕಾರಕ್ಕೆ ಮಾರ್ಚ್ 23ರಂದು ಪತ್ರ ಬರೆಯಲಾಗಿದೆ ಎಂದು ವಿದೇಶಾಂಗ ಖಾತೆ ರಾಜ್ಯ ಸಚಿವ ಜನರಲ್ ವಿ.ಕೆ. ಸಿಂಗ್ ತಿಳಿಸಿದ್ದಾರೆ.         
 
short by NP / read more at Prajavani