Skip to main content


ಕಾಮನ್‌ವೆಲ್ತ್‌ ಕ್ರೀಡಾಕೂಟ: ಭಾರತದ ಪರ ನಾಲ್ಕನೇ ಚಿನ್ನ ಗೆದ್ದ ರಾಗಲ ವೆಂಕಟ್ ರಾಹುಲ್‌

ಇಲ್ಲಿ ನಡೆಯುತ್ತಿರುವ ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ಭಾರತದ ‌ ರಾಗಲ ವೆಂಕಟ್ ರಾಹುಲ್‌ ಶನಿವಾರ ವೇಟ್‌ಲಿಫ್ಟಿಂಗ್‌ನ 85 ಕೆ.ಜಿ. ಪುರುಷರ ವಿಭಾಗದಲ್ಲಿ ಚಿನ್ನದ ಪದಕ ಜಯಸಿದ್ದಾರೆ. ರಾಹುಲ್ ಒಟ್ಟು 338 ಕೆ.ಜಿ. ಭಾರ ಎತ್ತುವ ಮೂಲಕ ಈ ಸಾಧನೆ ಮಾಡಿದರು. ಇದರೊಂದಿಗೆ ಭಾರತ ಈವರೆಗೆ ನಾಲ್ಕು ಚಿನ್ನದ ಪದಕ ಗಳಿಸಿದಂತಾಗಿದೆ. 48 ಕೆ.ಜಿ ಮಹಿಳಾ ವೇಟ್‌ಲಿಫ್ಟಿಂಗ್‌ ವಿಭಾಗದಲ್ಲಿ ಸಾಯಿಕೋಮ್ ಮೀರಾ ಬಾಯಿ ಚಾನು ಚಿನ್ನದ ಪದಕ ಗಳಿಸಿದ್ದರೆ, ಸಂಜಿತಾ ಚಾನು ಅವರು 53 ಕೆ.ಜಿ ಮಹಿಳಾ ವೇಟ್‌ಲಿಫ್ಟಿಂಗ್‌ ವಿಭಾಗದಲ್ಲಿ ಚಿನ್ನ ಗೆದ್ದಿದ್ದಾರೆ.        

short by Prajwal / read more at Prajavani