Skip to main content


ಸಿನಿಮಾ ಪತ್ರಕರ್ತರಿಗೆ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್‌‌ ಪಾರ್ಟಿ

ಇತ್ತೀಚೆಗೆ ನಡೆದ ಪತ್ರಿಕಾಗೋಷ್ಟಿಯೊಂದರಲ್ಲಿ ಅಲ್ಲು ಅರ್ಜುನ್ ತಮ್ಮ ವೈಯಕ್ತಿಕ ಫೊಟೋಗಳನ್ನು ಮಿಡಿಯಾದವರಿಗೆ ನೀಡಿ ಆದಷ್ಟು ಬೇಗ ಎಲ್ಲರನ್ನೂ ಮತ್ತೆ ಭೇಟಿಯಾಗುತ್ತೇನೆ. ನಿಮ್ಮ ಪ್ರೋತ್ಸಾಹ ಸದಾ ಹೀಗೆ ಇರಲಿ ಎಂದು ಹೇಳಿದ್ದರು. ಏಪ್ರಿಲ್ 8 ರಂದು ಅಲ್ಲು ಅರ್ಜುನ್ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದು, ಪ್ರೀ ಬರ್ತಡೇ ಪಾರ್ಟಿ ಎಂಬಂತೆ ಏಪ್ರಿಲ್ 6 (ಇಂದು) ಸಿನಿ ಜರ್ನಲಿಸ್ಟ್‌‌ಗಳಿಗೆ ಹೈದರಾಬಾದ್‌ನ ಜ್ಯೂಬ್ಲಿ ಹಿಲ್ಸ್‌‌‌‌ನ ' ಪೋಶ್‌ ಪಬ್‌‌‌'ನಲ್ಲಿ ಪಾರ್ಟಿ ಏರ್ಪಡಿಸಿದ್ದಾರೆ ಎನ್ನಲಾಗಿದೆ.  ಬರ್ತಡೇ ಹಿಂದಿನ ದಿನ ಅಂದರೆ, ಎಪ್ರಿಲ್ 7 ರಂದು ಪಾರ್ಟಿ ನೀಡಲು ಈ ಮೊದಲು ಬನ್ನಿ ನಿರ್ಧರಿಸಿದ್ದರಂತೆ. ಆದರೆ ಅದೇ ದಿನ ಪ್ರಿನ್ಸ್ ಮಹೇಶ್ ಬಾಬು ಅಭಿನಯದ ' ಭರತ್ ಅನೇ ನೇನು' ಸಿನಿಮಾದ ಪ್ರೀ ರಿಲೀಸ್ ಈವೆಂಟ್ ಇರುವ ಕಾರಣ 6 ರಂದು ಪಾರ್ಟಿ ನೀಡಲು ಡೇಟ್ ಫಿಕ್ಸ್ ಮಾಡಿದ್ದಾರೆ ಎನ್ನಲಾಗಿದೆ.

short by SP / read more at EenaduIndia