Skip to main content


ರಂಗಸ್ಥಳಂನಲ್ಲಿನ ಲಿಪ್ ಲಾಕ್ ರಹಸ್ಯ ಬಯಲು ಮಾಡಿದ ನಟಿ ಸಮಂತಾ !!

ರಂಗಸ್ಥಳಂ ಚಿತ್ರ ಸದ್ಯಕ್ಕೆ ತೆಲುಗು ಚಿತ್ರರಂಗದಲ್ಲಿ ಭಾರಿ ಸದ್ದು ಮಾಡುತ್ತಿದೆ. ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದ ಚಿತ್ರ ವಿದೇಶದಲ್ಲೂ ಭಾರಿ ಗಳಿಕೆ ಮಾಡುತ್ತಿದೆ. ಅಷ್ಟೇ ಅಲ್ಲದೆ ಚಿತ್ರದಲ್ಲಿನ ರಾಮ್ ಚರಣ್ ಹಾಗೂ ಸಮಂತಾ ಅಭಿನಯಕ್ಕೆ ಎಲ್ಲರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸುಕುಮಾರ್ ನಿರ್ದೇಶನದ ರಂಗಸ್ಥಳಂ ಚಿತ್ರದಲ್ಲಿ ಸಮಂತಾ ಬೋಲ್ಡ್ ಆಗಿ ನಟಿಸಿದ್ದಾರೆ. ಅಷ್ಟೇ ಅಲ್ಲದೆ ಚಿತ್ರದಲ್ಲಿ ರಾಮ್ ಚರಣ್ ಜೊತೆ ಲಿಪ್ ಲಾಕ್ ಸಹ ಮಾಡಿದ್ದಾರೆ. ಚಿತ್ರದಲ್ಲಿನ ಬೋಲ್ಡ್ ನಟನೆಯ ಕುರಿತಂತೆ ಪತ್ರಕರ್ತರು ಸಮಂತಾ ಅವರನ್ನು ಪ್ರಶ್ನಿಸಿದ್ದಾರೆ. ಮದುವೆಯಾದ ಬಳಿಕವೂ ಅದು ಹೇಗೆ ಲಿಪ್ ಲಾಕ್ ಮಾಡಲು ಒಪ್ಪಿದಿರಿ ಎಂದು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಮಂತಾ, ಮದುವೆಗೆ ಮುಂಚೆ ಇಂತಹ ಪ್ರಶ್ನೆಗಳನ್ನು ಯಾಕೆ ಕೇಳುವುದಿಲ್ಲ ಎಂದು ಮರುಪ್ರಶ್ನೆ ಹಾಕಿದ್ದಾರೆ. ಮದುವೆಯಾದ ಬಳಿಕ ಯಾಕೆ ಇಂತಹ ಪ್ರಶ್ನೆಗಳನ್ನು ಎದುರಿಸಬೇಕಾಗುತ್ತದೆ  ಎಂದಿದ್ದಾರೆ. ಇದೇ ವೇಳೆ ತಮ್ಮ ಚುಂಬನದ ಕುರಿತ ರಹಸ್ಯವನ್ನು ಭೇದಿಸಿರುವ ಅವರು, ನಾನು ರಾಮ್ ಚರಣ್ ಅವರ ಕೆನ್ನೆಗೆ ಮುತ್ತು ಕೊಟ್ಟಿದೆ. ಬಳಿಕ ಅದನ್ನು ಕಂಪ್ಯೂಟರ್ ಗ್ರಾಫಿಕ್ಸ್ ಬಳಸಿಕೊಂಡು ಬದಲಿಸಲಾಗಿದೆ ಎಂದು ಹೇಳಿಕೊಂಡಿದ್ದಾರೆ.

short by: Nithin read more at Balkani News

Comments