Skip to main content


ಮಫ್ತಿ ನರ್ತನ್ ಮತ್ತು ಯಶ್ ಚಿತ್ರದ ಬಗ್ಗೆ ಹೊರಬಿತ್ತು ಎಕ್ಸ್ ಕ್ಲೂಸಿವ್ ಮಾಹಿತಿ..!

ಮಫ್ತಿ ಯಾದ ನಂತರ ನರ್ತನ್ ಅವರು ಯಾವ ಚಿತ್ರ ಮಾಡಲಿದ್ದಾರೆ ಎಂಬ ಕುತೂಹಲ ಎಲ್ಲರಲ್ಲೂ ಮೂಡಿತ್ತು ಇದೀಗ ಆ ಕುತೂಹಲಕ್ಕೆ ಸ್ವತಃ ನರ್ತನ್ ಅವರೇ ಉತ್ತರ ನೀಡಿದ್ದಾರೆ. ಹೌದು ನರ್ತನ್ ಅವರು ನಂಬರ್ ವನ್ ಯಾರಿ ವಿತ್ ಶಿವಣ್ಣ ಕಾರ್ಯಕ್ರಮದಲ್ಲಿ ತಾವು ನಿರ್ದೇಶಿಸಲಿರುವ ಮುಂದಿನ ಚಿತ್ರದ ಬಗ್ಗೆ ಮಾಹಿತಿ ನೀಡಿದರು. ಹಾಗೂ ತಾವು ನಿರ್ದೇಶನದಲ್ಲೂ ಹೊರಟಿರುವ ಮುಂದಿನ ಚಿತ್ರಕ್ಕೆ ನಾಯಕ ನಟನನ್ನಾಗಿ ರಾಕಿಂಗ್ ಸ್ಟಾರ್ ಯಶ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಹೇಳಿದ್ದಾರೆ. ಸದ್ಯ ಕೆಜಿಎಫ್ ಚಿತ್ರದ ಶೂಟಿಂಗ್ನಲ್ಲಿ ಬ್ಯುಸಿಯಾಗಿರುವ ನಟ ಯಶ್ ಅದು ಮುಗಿದ ಬಳಿಕ ನರ್ತನ್ ಅವರ ಚಿತ್ರದಲ್ಲಿ ಅಭಿನಯಿಸುತ್ತಾರೆ ಎನ್ನುವ ಮಾಹಿತಿ ಇದೆ. ಇನ್ನು ನರ್ತನ್ ಅವರು ಯಶ್ ಅವರಿಗೆ ನಿರ್ದೇಶಿಸಲಿರುವ ಚಿತ್ರದ ಬಗ್ಗೆ ಮಾಹಿತಿಯೊಂದನ್ನು ಬಿಟ್ಟುಕೊಟ್ಟಿದ್ದಾರೆ. ಹೌದು ಆ ಮಾಹಿತಿಯೇ ಚಿತ್ರದ ಒನ್ ಲೈನ್ ಸ್ಟೋರಿ. ಪ್ರತಿಯೊಬ್ಬ ಸಮಾಜಕೋಸ್ಕರ ಬದುಕಿದರೆ ಹೇಗಿರುತ್ತದೆ ಎಂಬುದೇ ಚಿತ್ರದ ಒನ್ಲೈನ್ ಸ್ಟೋರಿ ಎಂದು ನರ್ತನ್ ಬಿಚ್ಚಿಟ್ಟಿದ್ದಾರೆ. ಈಗಾಗಲೇ ಯಶ್ ಅವರನ್ನು ಪೊರ್ಕಿ ಅವತಾರದಲ್ಲಿ ಸಾಕಷ್ಟು ಸಿನಿಮಾಗಳಲ್ಲಿ ನೋಡಿದ್ದೇವೆ ಅದರಲ್ಲೂ ಮಾಸ್ಟರ್ ಪೀಸ್ ಸಿನಿಮಾದಲ್ಲಿ ಯಶ್ ಅವರು ಪಾರ್ಟಿಯಾಗಿ ಕಾಣಿಸಿಕೊಂಡು ಪ್ರೇಕ್ಷಕರಿಗೆ ಸಖತ್ ಇಷ್ಟವಾಗಿ ಬಿಟ್ಟಿದ್ದರು.    

short by: Pawan

Comments