Skip to main content


ತಂದೆ-ತಾಯಿ ಕಣ್ಣಲ್ಲಿ ನೀರು ಸುರಿಸಿದ ಬಾಲಿವುಡ್ ಬೆಡಗಿ ಆಲಿಯಾ ಭಟ್

ಜಂಗ್ಲಿ ಪಿಕ್ಚರ್ಸ್ ಮತ್ತು ಧರ್ಮಾ ಪ್ರೊಡಕ್ಷನ್ಸ್ ನಿರ್ಮಾಣದ 'ರಾಝಿ' ಚಿತ್ರದ ಟ್ರೇಲರ್ ಬಿಡುಗಡೆಯಾಗಿ ಭಾರಿ ಸೌಂಡ್ ಮಾಡ್ತಿದೆ. ಚಿತ್ರದ ಟ್ರೈಲರ್ ನೋಡಿದ ಅಭಿಮಾನಿಗಳು ಆಲಿಯಾ ನಟನೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ, ಈಗ ವಿಷಯ ಏನಪ್ಪ ಅಂದರೆ ಚಿತ್ರದ ಟ್ರೇಲರ್ ನೋಡಿದ ಆಲಿಯಾ ತಂದೆ ತಾಯಿಗಳು ಕಣ್ಣೀರು ಸುರಿಸಿದ್ದಾರೆ. ಹೌದು, ರಾಝಿ ಚಿತ್ರದ ಟ್ರೇಲರ್ ನೋಡಿದ ಆಲಿಯಾ ತಂದೆ-ತಾಯಿ ಮಗಳ ನಟನೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದು, ಆನಂದ ಬಾಷ್ಪ ಸುರಿಸಿದ್ದಾರೆ. ನಟಿ ಆಲಿಯಾ ಭಟ್ ಚಿತ್ರದಲ್ಲಿ ಮೂರು ವಿಭಿನ್ನ ಶೇಡ್ ಗಳಲ್ಲಿ ಕಾಣಿಸಿಕೊಂಡಿದ್ದಾರೆ. . ಆಲಿಯಾ ಭಟ್‍ಗೆ ಪತಿಯಾಗಿ ವಿಕಿ ಕೌಶಾಲ್ ಅಭಿನಯಿಸಿದ್ದಾರೆ.ವಿನೀತ್ ಜೈನ್, ಕರಣ್ ಜೋಹರ್ ಮತ್ತು ಅಪೂರ್ವ ಮೆಹ್ತಾ ನಿರ್ಮಿಸಿರುವ ಹಾಗೂ ಪ್ರೀತಿ ಶಹಾನಿ ಸಹ ನಿರ್ಮಾಣದಈ ಚಿತ್ರಕ್ಕೆ ಮೇಘನಾ ಗುಲ್ಜಾರ್ ಆಕ್ಷನ್ ಕಟ್ ಹೇಳಿದ್ದಾರೆ.     

short by Pawan / read more at Kannada News Now

Comments