Skip to main content


ತಂದೆ ಚಾಲಕ, ತಾಯಿ ಮನೆಯೊಡತಿ... ಕಡು ಬಡತನ ಮೆಟ್ಟಿನಿಂತ ಹಳ್ಳಿ ಹುಡುಗನ 'ಬೆಳ್ಳಿ' ಕಥೆ!

ಆತ ದಟ್ಟ ಕಾಡಿನ ಮಧ್ಯದ ಇರುವ ಪ್ರದೇಶದಲ್ಲಿ ವಾಸಿಸುತ್ತಿದ್ದ. ತಂದೆ ವೃತ್ತಿಯಲ್ಲಿ ಚಾಲಕ. ತಾಯಿ ಮನೆಯೊಡತಿ. ಕಡು ಬಡತನವನ್ನು ಮೆಟ್ಟಿನಿಂತ ಆತ ಇಂದು ದೇಶಕ್ಕೆ ಕಾಮನ್‌ವೇಲ್ತ್‌ ವೇಯ್ಟ್‌‌ ಲಿಫ್ಟಿಂಗ್‌ನಲ್ಲಿ ಬೆಳ್ಳಿ ಪದಕ ತಂದುಕೊಟ್ಟಿದ್ದಾರೆ. ಕುಂದಾಪುರ ತಾಲೂಕು ಚಿತ್ತೂರು ಗ್ರಾಮದ ವಂಡ್ಸೆ ನಿವಾಸಿ ಮಹಾಬಲ ಪೂಜಾರಿ ಮತ್ತು ಪದ್ಧು ಪೂಜಾರಿಯವರ ಮಗ ಗುರುರಾಜ್. 56 ಕೆ.ಜಿ ವೇಯ್ಟ್‌ ಲಿಫ್ಟಿಂಗ್ ವಿಭಾಗದಲ್ಲಿ ಬೆಳ್ಳಿ ಪದಕ ಗೆಲ್ಲುವ ಮೂಲಕ ದೇಶದ ಕೀರ್ತಿಯನ್ನು ಗಗನದೆತ್ತರಕ್ಕೆ ಹಾರಿಸುವಲ್ಲಿ ಯಶಸ್ವಿಯಾಗಿದ್ದಾರೆ ನಮ್ಮ ಕನ್ನಡದ ಕುಡಿ. ಬಾಲ್ಯದಿಂದಲೇ ಕ್ರೀಡೆಯಲ್ಲಿ ತುಂಬಾ ಆಸಕ್ತಿ ಹೊಂದಿದ್ದ ಗುರುರಾಜ್ ಛಲ ಬಿಡದ ಪರಿಶ್ರಮದಿಂದಾಗಿ ಈ ಗುರಿಯನ್ನು ತಲುಪಿದ್ದಾರೆ.

short by Pawan / read more at Eenadu India

Comments