Skip to main content


ರಾ.ರಾ.ನಗರದಲ್ಲಿ ಸ್ಪರ್ಧೆಗಿಳಿದಿರುವ "ಹುಚ್ಚ" ವೆಂಕಟ್ ಆಸ್ತಿಯೆಷ್ಟು?

ಯಸ್, ಹುಚ್ಚ ವೆಂಕಟ್ ಅವರು ಮುನಿರತ್ನರ ವಿರುದ್ಧ ಸೆಡ್ಡು ಹೊಡೆದು ರಾಜರಾಜೇಶ್ವರಿ ನಗರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಅವರ ಒಟ್ಟು ಆಸ್ತಿಯ ಮೊತ್ತ 13,08,733 ರುಪಾಯಿಗಳು ಮಾತ್ರ.
ಮೆಂಟಲ್ ಮಂಜ ಚಿತ್ರದಲ್ಲಿ ನಟಿಸಿ, ಹುಚ್ಚು ವೆಂಕಟ್, ಪೊರ್ಕಿ ಹುಚ್ಚ ವೆಂಕಟ್, ತಿಕ್ಲ ಹುಚ್ಚ ವೆಂಕಟ್, ಡಿಕ್ಟೇಟರ್ ಹುಚ್ಚ ವೆಂಕಟ್, ದುರಂಕಾರಿ ಹುಚ್ಚ ವೆಂಕಟ್ ಚಿತ್ರಗಳನ್ನು ನಿರ್ಮಿಸಿ, ನಿರ್ದೇಶಿಸಿ, ನಟಿ, ಸಂಗೀತ ನೀಡಿ, ಡೈಲಾಗನ್ನೂ ಬರೆದು, ಪ್ರಮುಖ ಪಾತ್ರದಲ್ಲಿ ನಟಿಸಿ, ಬಿಗ್ ಬಾಸ್ ನಲ್ಲಿಯೂ ಹಲವಾರು ವಾರ ಕಳೆದು, ಇಷ್ಟೊಂದು ಖ್ಯಾತಿ ಗಳಿಸಿರುವ ಹುಚ್ಚ ವೆಂಕಟ್ ಬಳಿ ಇಷ್ಟೇನಾ ಇರುವುದು ಅಚ್ಚರಿಯಾದರೆ ಅದು ನಿಮ್ಮ ತಪ್ಪಲ್ಲ. ಇಷ್ಟೆಲ್ಲ ಮಾಡಲು ಅವರು ತಮ್ಮ ಅಪ್ಪನಿಂದ 1 ಕೋಟಿ 7 ಲಕ್ಷ ರುಪಾಯಿ ಸಾಲ ಪಡೆದಿದ್ದಾರೆ. ಹೀಗಾಗಿ ಅವರು ಒಂದು ರೀತಿ ಬರಿಗೈ ದಾಸ. ಅವರ ಕೈಯಲ್ಲಿ ಇರುವುದು ಕೇವಲ 10 ಸಾವಿರ ರುಪಾಯಿ, ಕಾರ್ಪೊರೇಷನ್ ಬ್ಯಾಂಕಲ್ಲಿ 124.42 ರುಪಾಯಿ, ಐಸಿಐಸಿಐ ಬ್ಯಾಂಕಲ್ಲಿ 133.85 ರುಪಾಯಿ, ಎಚ್‌ಡಿಎಫ್‌ಸಿ ಬ್ಯಾಂಕಲ್ಲಿ ಸೊನ್ನೆ, ಇಂಡಿಯನ್ ಓವರ್ ಸೀಸ್ ಬ್ಯಾಂಕಲ್ಲಿ 61.06 ರುಪಾಯಿ, ಅವರ ಬಳಿ 1.5 ಲಕ್ಷ ರುಪಾಯಿ ಮೌಲ್ಯದ ಹ್ಯುಂಡೈ ಎಸೆಂಟ್ ಕಾರಿದೆ. ಅವರ ಒಟ್ಟು ಚರಾಸ್ತಿಯ ಮೊತ್ತ 1,60,319 ರುಪಾಯಿಗಳು ಮಾತ್ರ. ಅವರ ಬಳಿ ಕೃಷಿ ಅಥವಾ ಕೃಷಿಯೇತರ ಯಾವುದೇ ಸ್ಥಿರಾಸ್ತಿ ಇಲ್ಲವೇ ಇಲ್ಲ.       

short by Pawan / more at Oneindia

Comments