Skip to main content


ಶಾಕಿಂಗ್ : ಹುಟ್ಟುಹಬ್ಬದ ದಿನದಂದೇ ಆಸ್ಟ್ರೇಲಿಯಾ ಕ್ರಿಕೆಟ್‍ನಿಂದ ಸಚಿನ್‍ಗೆ ಅವಮಾನ!

ಇಂದು ಕ್ರಿಕೆಟ್ ದಂತಕಥೆ, ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ 45 ನೇ ಜನ್ಮದಿನಾಚರಣೆ ಆಚರಿಸಿಕೊಳ್ಳುತ್ತಿದ್ದು, ಅವರಿಗೆ ಆಸ್ಟ್ರೇಲಿಯಾದ ಕ್ರಿಕೆಟ್ ಅವಮಾನ ಮಾಡಿದೆ ಎಂದು ಆರೋಪಿಸಿ ಸಚಿನ್ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಟೀಕೆ ಮಾಡಿದ್ದಾರೆ. ಏಪ್ರಿಲ್ 24 ರಂದು ಸಚಿನ್ ಹಾಗೂ ಆಸ್ಟ್ರೇಲಿಯಾದ ಮಾಜಿ ವೇಗದ ಬೌಲರ್ ಡೇಮಿಯನ್ ಫ್ಲೆಮಿಂಗ್ ಹುಟ್ಟಹುಬ್ಬ, ಹಾಗಾಗಿ ಆಸೀಸ್ ಕ್ರಿಕೆಟ್ 2000 ಇಸವಿಯಲ್ಲಿ ಪರ್ಥ್ ನಲ್ಲಿ ನಡೆದ ಏಕದಿನ ಪಂದ್ಯದ ವೇಳೆ ಸಚಿನ್ ಬೌಲ್ಡ್ ಆಗುತ್ತಿರುವ ವಿಡಿಯೋವನ್ನು ಟ್ವೀಟ್ ಮಾಡಿದೆ. ಈ ಟ್ವೀಟ್ ನಲ್ಲಿ ಫ್ಲೆಮಿಂಗ್ ಅವರಿಗೆ ಮಾತ್ರ ಹುಟ್ಟಹುಬ್ಬದ ಶುಭಾಶಯ ಕೋರಿದೆ, ಹೀಗಾಗಿ ಟ್ವೀಟ್ ನೋಡಿದ ಅಭಿಮಾನಿಗಳು ಆಸೀಸ್ ಆಟಗಾರರು ಕ್ರಿಕೆಟ್ ಪಂದ್ಯಗಳಿಂದ ಬ್ಯಾನ್ ಆದರೂ ಆಸ್ಟ್ರೇಲಿಯಾ ಇನ್ನೂ ಪಾಠ ಕಲಿತಿಲ್ಲ ಎನ್ನುವುದಕ್ಕೆ ಈ ವಿಡಿಯೋ ಸಾಕ್ಷಿ ಎಂದು ಬರೆದು ತಿರುಗೇಟು ನೀಡಿದ್ದಾರೆ.       

short by Prajwal / more at Dailyhunt

Comments