Skip to main content


ಡೆಲ್ಲಿ: ರಬಾಡ ಬದಲು ಫ್ಲಂಕೆಟ್‌

ಐಪಿಎಲ್‌ ಹನ್ನೊಂದನೇ ಆವೃತ್ತಿಯಿಂದ ಡೆಲ್ಲಿ ಡೇರ್‌ಡೆವಿಲ್ಸ್‌ ತಂಡದ ವೇಗಿ, ದಕ್ಷಿಣ ಆಫ್ರಿಕಾದ ಕಾಗಿಸೊ ರಬಾಡ ಹೊರಬಿದ್ದಿದ್ದಾರೆ. ರಬಾಡ ಬದಲಿಗೆ ಇಂಗ್ಲೆಂಡ್‌ ವೇಗಿ ಲಿಯಮ್‌ ಫ್ಲಂಕೆಟ್‌ ಆಯ್ಕೆಯಾಗಿದ್ದಾರೆ ಎಂದು ಡೆಲ್ಲಿ ಡೇರ್‌ಡೆವಿಲ್ಸ್‌ ತಂಡದ ಮೂಲಗಳು ತಿಳಿಸಿವೆ. ಫ್ಲಂಕೆಟ್‌ ಇಂಗ್ಲೆಂಡ್‌ ತಂಡದ ಪರ 13 ಟೆಸ್ಟ್‌, 65 ಏಕದಿನ ಹಾಗೂ 15 ಟಿ20 ಪಂದ್ಯವನ್ನಾಡಿದ್ದಾರೆ. ಎರಡು ದಿನಗಳ ಹಿಂದೆ ರಬಾಡ ಗಾಯಗೊಂಡಿದ್ದರು. ಅವರು 11ನೇ ಐಪಿಎಲ್‌ನಲ್ಲಿ ಆಡುವ ಸಾಧ್ಯತೆ ಇಲ್ಲ ಎಂದು ಫ್ರಾಂಚೈಸಿ ಮೂಲಗಳು ಸ್ಪಷ್ಟಪಡಿಸಿದ್ದವು.       

short by Pawan / read more at Udayavani

Comments