Skip to main content


ಯುವಿ-ಹೇಝಲ್ ಮಧ್ಯೆ ಮುನಿಸು..ಬೇರೆಯಾಗ್ತಿದೆಯಾ ಜೋಡಿ?

ಕ್ರಿಕೆಟರ್ ಯುವರಾಜ್ ಸಿಂಗ್ ಹಾಗೂ ಪತ್ನಿ ಹೇಝಲ್ ಮಧ್ಯೆ ಎಲ್ಲವೂ ಸರಿಯಿಲ್ಲ ಎಂಬ ಸುದ್ದಿ ಹೊರ ಬರ್ತಿದೆ. ಮಾಧ್ಯಮಗಳ ವರದಿ ಪ್ರಕಾರ ಇಬ್ಬರ ಸಂಬಂಧದಲ್ಲಿ ಬಿರುಕು ಕಾಣಿಸಿದೆಯಂತೆ. ಪ್ರತಿ ಬಾರಿ ಪತ್ನಿ ಜೊತೆಗಿರುವ ಫೋಟೋವನ್ನು ಸಾಮಾಜಿಕ ಜಾಲತಾಣಕ್ಕೆ ಹಾಕ್ತಿದ್ದ ಯುವರಾಜ್ ಫೆಬ್ರವರಿ ನಂತ್ರ ಪತ್ನಿ ಜೊತೆಗಿರುವ ಫೋಟೋವನ್ನು ಹಂಚಿಕೊಂಡಿಲ್ಲ. ಇತ್ತ ಹೇಝಲ್ ಇನ್ಸ್ಟ್ರಾಗ್ರಾಮ್ ಪೋಸ್ಟ್ ನಲ್ಲಿಯೂ ಯುವರಾಜ್ ಕಣ್ಮರೆಯಾಗಿದ್ದಾರೆ. ಮಾರ್ಚ್ 1ರಿಂದ ಹೇಝಲ್ ಇನ್ಸ್ಟ್ರಾಗ್ರಾಮ್ ನಲ್ಲಿ ಯುವರಾಜ್ ಇಲ್ಲ. ಇಬ್ಬರ ಮಧ್ಯೆ ಸಂಬಂಧ ಸರಿಯಿಲ್ಲ. ಯುವಿ, ಹೇಝಲ್ ನಿಂದ ದೂರ ಹೋಗಲು  ನಿರ್ಧರಿಸಿದ್ದಾರೆ ಎಂಬ ಸುದ್ದಿಗಳು ಹರಿದಾಡುತ್ತಿವೆ.

short by: Nithin / read more at Kannada dunia

Comments