Skip to main content


ಕ್ರೀಡಾಪಟು ಆಗಲು ರಶ್ಮಿಕಾ ತಯಾರಿ

ದಕ್ಷಿಣ ಭಾರತದ ಮೋಸ್ಟ್ ವಾಂಟೆಡ್ ನಟಿಯರ ಪಟ್ಟಿಯಲ್ಲಿ ರಶ್ಮಿಕಾ ಮಂದಣ್ಣ ಹೆಸರು ಕೂಡ ಇದೆ. ‘ಕಿರಿಕ್ ಪಾರ್ಟಿ’ ಚಿತ್ರದ ಭಾರಿ ಯಶಸ್ಸಿನ ಬಳಿಕ ಅವರ ಖ್ಯಾತಿ ಪಕ್ಕದ ಟಾಲಿವುಡ್​ಗೂ ಹಬ್ಬಿತು. ತೆಲುಗಿನ ‘ಚಲೋ’ ಚಿತ್ರಕ್ಕೆ ನಾಯಕಿಯಾಗಿ ನಟಿಸಿ, ಅಲ್ಲಿನ ಪ್ರೇಕ್ಷಕರನ್ನೂ ಇಂಪ್ರೆಸ್ ಮಾಡಿದರು. ಅಷ್ಟಕ್ಕೇ ಮುಗಿಯಲಿಲ್ಲ, ‘ಅರ್ಜುನ್ ರೆಡ್ಡಿ’ ಖ್ಯಾತಿಯ ವಿಜಯ್ ದೇವರಕೊಂಡ ನಟಿಸುತ್ತಿರುವ ಹೊಸ ಚಿತ್ರಕ್ಕೂ ಆಯ್ಕೆ ಆಗುವ ಮೂಲಕ ಎಲ್ಲರ ಹುಬ್ಬೇರುವಂತೆ ಮಾಡಿದರು ರಶ್ಮಿಕಾ. ವಿಶೇಷವೆಂದರೆ ಈ ಚಿತ್ರದಲ್ಲಿ ಕ್ರೀಡಾಪ್ರಧಾನ ಕಥಾಹಂದರ ಇರಲಿದೆ. ಆದರೆ ಯಾವ ಕ್ರೀಡೆಗೆ ಸಂಬಂಧಿಸಿರಲಿದೆ ಎಂಬ ಮಾಹಿತಿ ಇದುವರೆಗೂ ಬಹಿರಂಗವಾಗಿಲ್ಲ. ಪ್ರತಿ ವಿವರವನ್ನೂ ಗೌಪ್ಯವಾಗಿಯೇ ಇರಿಸುತ್ತ, ಚಿತ್ರದ ಕೆಲಸಗಳಿಗೆ ಚಾಲನೆ ನೀಡಿದ್ದಾರಂತೆ ನಿರ್ದೇಶಕ ಭರತ್ ಕಮ್ಮಾ. ಈ ನಡುವೆ ಕೇಳಿಬರುತ್ತಿರುವ ವಿಷಯವೇನೆಂದರೆ, ಈಗಾಗಲೇ ಈ ಚಿತ್ರಕ್ಕಾಗಿ ರಶ್ಮಿಕಾ ತಯಾರಿ ಶುರುಮಾಡಿದ್ದಾರಂತೆ. ಮೂಲಗಳ ಪ್ರಕಾರ, ಸತತ ಎರಡು ತಿಂಗಳ ಕಾಲ ಅವರು ತರಬೇತಿ ಪಡೆಯಲಿದ್ದಾರೆ. ಹತ್ತಾರು ಚಿತ್ರಗಳ ಆಫರ್ ಎದುರಿಗೆ ಇರುವಾಗಲೇ ಕ್ರೀಡಾಪಟು ಪಾತ್ರದ ತಯಾರಿಗಾಗಿ ಅಂದಾಜು 60 ದಿನಗಳ ಸಮಯ ಮೀಸಲಿಡುತ್ತಿರುವುದು ವಿಶೇಷ. ಅವರ ಬದ್ಧತೆಗೆ ಇಡೀ ತಂಡ ಮೆಚ್ಚುಗೆ ವ್ಯಕ್ತಪಡಿಸಿದೆಯಂತೆ.       

short by Pawan / more at Vijayavani

Comments