Skip to main content


ಕೊನೆ ಕ್ಷಣದಲ್ಲಿ ಭಾರತದ ಗೆಲುವು ಕಸಿದುಕೊಂಡ ಪಾಕ್

ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಕಾಮನ್ ವೆಲ್ತ್ ಗೇಮ್ಸ್ ನ ಮೂರನೇ ದಿನ ಭಾರತೀಯರ ಹೋರಾಟ ಮುಂದುವರೆದಿದೆ. ಪುರುಷರ ಹಾಕಿ ಪೂಲ್ ಬಿ ಮೊದಲ ಪಂದ್ಯ ಡ್ರಾನಲ್ಲಿ ಅಂತ್ಯವಾಗಿದೆ. ಪಾಕಿಸ್ತಾನದ ವಿರುದ್ಧ ಹೋರಾಟ ನಡೆಸಿದ ಭಾರತ ಹಾಕಿ ತಂಡದ ಗೆಲುವು, ಕೊನೆ 10 ಸೆಕೆಂಡ್ ನಲ್ಲಿ ಬದಲಾಯ್ತು. ಆರಂಭದಿಂದಲೂ ಭಾರತ ತಂಡ ಉತ್ತಮ ಪ್ರದರ್ಶನ ನೀಡ್ತು. 13ನೇ ನಿಮಿಷದಲ್ಲಿ ದಿಲ್ಪ್ರೀತ್ ಹಾಗೂ 19ನೇ ನಿಮಿಷದಲ್ಲಿ ಹರ್ಮನ್ ಪ್ರೀತ್ ಭಾರತದ ಪರ ಗೋಲ್ ಬಾರಿಸಿದ್ರು. ಪಾಕಿಸ್ತಾನದ ಇರ್ಫಾನ್ 38ನೇ ನಿಮಿಷಕ್ಕೆ ಒಂದು ಗೋಲ್ ಬಾರಿಸಿದ್ರು. 10 ಸೆಕೆಂಡ್ ವರೆಗೂ ಭಾರತಕ್ಕೆ ಗೆಲುವು ಎಂದುಕೊಂಡಿದ್ದ ಅಭಿಮಾನಿಗಳಿಗೆ ಕೊನೆಯಲ್ಲಿ ನಿರಾಶೆಯಾಯ್ತು. ಕೊನೆಯ 60ನೇ ನಿಮಿಷದಲ್ಲಿ ಮುಬಾಷರ್ ಒಂದು ಗೋಲು ಬಾರಿಸಿ ಡ್ರಾ ಮಾಡಿದ್ರು.

Short by Prajwal / read more at kannadadunia