Skip to main content


ಯಶ್ ಚುನಾವಣಾ ಪ್ರಚಾರಕ್ಕಿಳಿಯೋದು ಪಕ್ಕಾ..! ಯಾವ ಪಕ್ಷದ ಪರ ಗೊತ್ತೇ..?

ಕರ್ನಾಟಕದಲ್ಲಿ ಈಗ ಚುನಾವಣಾ ಪರ್ವ ಶುರುವಾಗಿದೆ. ಯಶ್ ಅವರು ಇಲ್ಲೂ ಕೂಡ ತಮ್ಮ ಜಾಣತನವನ್ನು ತೋರಿದ್ದಾರೆ, ಚುನಾವಣೆಗೂ ಮುನ್ನ ಪ್ರಜೆಗಳಿಗೆ ನಾನಾ ಭರವಸೆಗಳನ್ನು ನೀಡುತ್ತಾರೆ ಆದರೆ ಚುನಾವಣೆ ನಂತರ ಅದನ್ನು ಮರೆಯುತ್ತಾರೆ, ಅಂತಹ ರಾಜಕಾರಣಿಗಳಿಗೆ ಈಗ ಯಶ್ ಬುದ್ಧಿ ಕಲಿಸಲಿದ್ದಾರೆ. ಸದ್ಯ ಯಾವುದೇ ರಾಜಕೀಯ ಪಕ್ಷದ ಪರ ಪ್ರಚಾರಕ್ಕೆ ಹೋಗದಿದ್ದರೂ ಕೂಡ ನಾನು ಪಕ್ಷಕ್ಕಿಂತ ವ್ಯಕ್ತಿಗೆ ಹೆಚ್ಚು ಪ್ರಾಮುಖ್ಯತೆ ನೀಡುತ್ತೇನೆ, ಆ ವ್ಯಕ್ತಿ ನನ್ನ ಕಂಡೀಷನ್‍ಗೆ ಒಪ್ಪಿದರೆ ಮಾತ್ರ ಆತನ ಪರ ಪ್ರಚಾರಕ್ಕೆ ಹೋಗುತ್ತೇನೆ. ನನಗೆ ರಾಜಕೀಯದಲ್ಲೂ ಸಾಕಷ್ಟು ಸ್ನೇಹಿತರಿದ್ದಾರೆ. ಅವರು ಬಂದು ನನ್ನನ್ನು ಪ್ರಚಾರಕ್ಕೆ ಕರೆದಿದ್ದಾರೆ ಆದರೆ ನಾನು ಅವರಿಗೆ ಯಾವುದೇ ಆಶ್ವಾಸನೆ ನೀಡಿಲ್ಲ. ಇಂದು ನಾನು ಸ್ಟಾರ್ ಪ್ರಚಾರಕನಾಗಿ ಪ್ರಚಾರ ಮಾಡಬಹುದು ಆದರೆ ಗೆದ್ದು ಬಂದ ನಂತರ ಆತ ದಾರಿ ತಪ್ಪಿದರೆ ಅದಕ್ಕೆ ನಾನು ಕೂಡ ಪರೋಕ್ಷವಾಗಿ ಕಾರಣನಾಗುತ್ತೇನೆ? ಆಗ ನಾನು ಏನು ಉತ್ತರ ಕೊಡಲಿ? ಆದ್ದರಿಂದ ಪ್ರಚಾರ ಮಾಡಲು ಯಾವುದೇ ನಿರ್ಧಾರ ಮಾಡಿಲ್ಲ ಎಂದು ಹೇಳಿದ್ದಾರೆ.   

short by Pawan / more at Cinisuddi

Comments