Skip to main content


ಶಾಕಿಂಗ್! ಮೂರು ತಿಂಗಳಲ್ಲಿ ಬಾಡಿಗೆ ಮನೆ ಖಾಲಿ ಮಾಡಿ: ನಟ ಯಶ್‌ ಕುಟುಂಬಕ್ಕೆ ಕೋರ್ಟ್‌ ಆದೇಶ

ಬನಶಂಕರಿ ಮೂರನೇ ಹಂತದಲ್ಲಿರುವ ಮುನಿಪ್ರಸಾದ್ ಎಂಬುವರ ಮನೆಯಲ್ಲಿದ್ದ ನಟ ಯಶ್ ಮತ್ತು ಕುಟುಂಬ ಬಾಡಿಗೆಯನ್ನೂ ನೀಡುತ್ತಿಲ್ಲ, ಮನೆಯನ್ನೂ ಖಾಲಿ ಮಾಡುತ್ತಿಲ್ಲ ಎಂದು ಆರೋಪಿಸಿ ಸಿವಿಲ್​ ಕೋರ್ಟ್​ಗೆ ಅರ್ಜಿ ಸಲ್ಲಿಸಲಾಗಿತ್ತು. ನಟ ಯಶ್ ಕುಟುಂಬ ಬಾಕಿ ಉಳಿಸಿಕೊಂಡಿರುವ 9.6 ಲಕ್ಷ ಬಾಕಿ ಹಣವನ್ನೂ ವಾಪಸ್ ನೀಡುವಂತೆ ಕೋರ್ಟ್ ಸೂಚಿಸಿದೆ. ಒಂದು ವರ್ಷದವರೆಗೆ ಬಾಡಿಗೆ ನೀಡಿದ್ದ ಯಶ್ ಕುಟುಂಬ, ಆ ನಂತರ ಬಾಡಿಗೆಯನ್ನೂ ನೀಡದೇ, ಮನೆಯನ್ನೂ ಖಾಲಿ ಮಾಡದೇ ಸತಾಯಿಸುತ್ತಿದ್ದರು ಎಂದು ಮನೆ ಮಾಲೀಕ ಮುನಿ ಪ್ರಸಾದ್ ಕೋರ್ಟ್ ಮೊರೆ ಹೋಗಿದ್ದರು. ಈ ಮನೆ ತಮಗೆ ಲಕ್ಕಿ ಎಂಬ ಕಾರಣಕ್ಕೆ ಖಾಲಿ ಮಾಡಲು ಯಶ್ ನಿರಾಕರಿಸಿದ್ದರು. ಮನೆಯನ್ನು ತಾವೇ ಕೊಂಡುಕೊಳ್ಳುತ್ತೇವೆ ಎಂದು ಮಾಲೀಕರನ್ನು ಒತ್ತಾಯಿಸುತ್ತಿದ್ದರು ಎನ್ನಲಾಗಿದೆ.          

short by Pawan / read more at Eenadu India


Comments