Skip to main content


ಅರಣ್ಯಾಧಿಕಾರಿಗಳಿಂದ ನಿತ್ರಾಣವಾಗಿ ಬಿದ್ದಿದ್ದ ಕಡವೆಯ ರಕ್ಷಣೆ

ಆಹಾರ ಅರಸಿ ಕಾಡಿನಿಂದ ನಾಡಿಗೆ ಬಂದು ನೀರು ಸಿಗದೆ ನಿತ್ರಾಣಗೊಂಡು ಬಿದ್ದಿದ್ದ ಕಡವೆಗೆ ಅರಣ್ಯಾಧಿಕಾರಿಗಳು ಚಿಕಿತ್ಸೆ ನೀಡಿ, ತಮ್ಮ ವಾಹನದಲ್ಲೇ ಕಾಡಿಗೆ ಬಿಟ್ಟಿರುವ ಘಟನೆ ಜಿಲ್ಲೆಯ ತರೀಕೆರೆ ತಾಲೂಕಿನ ನಂದಿಬಂಟ್ಲು ಗ್ರಾಮದಲ್ಲಿ ನಡೆದಿದೆ. ಭದ್ರಾ ಅಭಯಾರಣ್ಯದಿಂದ ಆಹಾರ ಹುಡುಕುತ್ತಾ ಗ್ರಾಮದ ಸಚಿನ್ ಎಂಬವರ ತೋಟಕ್ಕೆ ಬಂದಿದ್ದ ಕಡವೆ ಅಲ್ಲೇ ಸುಸ್ತಾಗಿ ಬಿದ್ದಿತ್ತು. ತೋಟಕ್ಕೆ ಬಂದ ಸಚಿನ್ ಕಡವೆಯನ್ನ ಕಂಡು ಅರಣ್ಯಾಧಿಕಾರಿಗಳಿಗೆ ವಿಷಯ ಮುಟ್ಟಿಸಿದ್ದಾರೆ.    

short by NP / read more at Public TV

Comments