Skip to main content


ತಾಯಿಯ ಮೃತ ದೇಹವನ್ನು ಮೂರು ವರ್ಷದಿಂದ ಪ್ರಿಡ್ಜ್ ನಲ್ಲಿಟ್ಟಿರುವ ಮಗ..

ಮಗನೊಬ್ಬ ತಾಯಿಯ ಮೃತದೇಹವನ್ನ ಮೂರೂ ವರ್ಷಗಳಿಂದ ಫ್ರಿಜ್ ನಲ್ಲಿ ಇಟ್ಟ ಘಟನೆ ಪಶ್ಚಿಮ ಬಂಗಾಲ ರಾಜ್ಯದ ಕೋಲ್ಕತ್ತಾದಲ್ಲಿ ನಡೆದಿದೆ. ತಾಯಿ ಆಹಾರ ನಿಗಮ ಅಧಿಕಾರಿಯಾಗಿ ಕೆಲಸದಲ್ಲಿ ಇದ್ದು ನಂತರ ವಿವೃತ್ತಿ ಹೊಂದಿದ್ದು ಅವರಿಗೆ ತಿಂಗಳಿಗೆ 50000 ರೂಪಾಯಿ ಪೆನ್ಶನ್ ಬರುತ್ತಿತ್ತು. ನಂತರ ಒಂದು ದಿನ ಆಕೆ ಮರಣ ಹೊಂದಿದಳು, ತಾಯಿ ಸತ್ತಿರುವ ವಿಷಯ ಗೊತ್ತಾದಾದರೆ ಪೆನ್ಶನ್ ಬರುವುದಿಲ್ಲ ಎಂದು ಭಾವಿಸಿದ ಮಗ ತಾಯಿಯ ಪೆನ್ಶನ್ ಗಾಗಿ ಆಕೆಯ ಮೃತದೇಹವನ್ನ 3 ವರ್ಷಗಳ ಕಾಲ ಫ್ರಿಜ್ ನಲ್ಲಿ ಇಟ್ಟನು. ಮಹಿಳೆ ಮೃತಪಟ್ಟಿರುವ ವಿಷಯ ತಿಳಿದಿತ್ತು ಆದರೆ ಆಕೆಯ ಅಂತ್ಯಸಂಸ್ಕಾರ ಮಾಡಿದ್ದರೋ ಇಲ್ಲವೋ ಎಂಬುದು ತಿಳಿದಿರಲಿಲ್ಲ ಎಂದು ಅಕ್ಕಪಕ್ಕ ಮನೆಯವರು ತಿಳಿಸಿದ್ದಾರೆ. 

short by Pawan / read more at Karnataka Today