Skip to main content


ಕನ್ನಡ ಅಥವಾ ಇಂಗ್ಲೀಷ್'ನಲ್ಲಿ ಟ್ವೀಟ್ ಮಾಡಿ, ಹಿಂದಿ ಅರ್ಥವಾಗುವುದಿಲ್ಲ; ಬಿಜೆಪಿ ಕಾಲೆಳೆದ ಸಿಎಂ ಸಿದ್ದು

ಸರ್, ಕನ್ನಡ ಅಥವಾ ಇಂಗ್ಲೀಷ್ ನಲ್ಲಿ ಟ್ವೀಟ್ ಮಾಡಿ, ನನಗೆ ಹಿಂದಿ ಅರ್ಥವಾಗುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಿಜೆಪಿ ರಾಜ್ಯ ಉಸ್ತುವಾರಿ ಪಿ. ಮುರುಳೀಧರ ರಾವ್ ಅವರ ಕಾಲೆಳೆದಿದ್ದಾರೆ. ನಿನ್ನೆಯಷ್ಟೇ ಮುರಳೀಧರ ರಾವ್ ಅವರು ಹಿಂದಿಯಲ್ಲಿ ಸಿದ್ದರಾಮಯ್ಯ ಅವರೇ ಹೆದರಿಬಿಟ್ಟಿರಾ? ಬಹಳ ಕಷ್ಟಪಟ್ಟು ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರವನ್ನು ಆಯ್ದುಕೊಂಡಿದ್ದೀರಿ. ಈಗ ಅಲ್ಲಿಯೂ ಸೋಲವು ಸೂಚನೆಗಳು ಕಂಡಾಗ ಬೇರೆ ಕ್ಷೇತ್ರ ಹುಡುಕುತ್ತಿದ್ದೀರಿ. ನಾನು ನಮ್ಮ ಸಂದೇಹವನ್ನು ನಿವಾರಿಸುತ್ತೇನೆ. ನಿಮ್ಮ ಎರಡೂ ಕ್ಷೇತ್ರಗಳು ಮಾತ್ರವಲ್ಲ, ಇಡೀ ಕರ್ನಾಟಕವೇ ಕಾಂಗ್ರೆಸ್ ಮುಕ್ತ ಮಾಡಲು ಹೊರಟಿದ್ದೇವೆಂದು ಹೇಳಿದ್ದರು. ನನಗೆ ಹಿಂದಿ ಅರ್ಥವಾಗುವುದಿಲ್ಲ ಎಂದು ಹೇಳಿ, ಬಿಜೆಪಿ ನಾಯಕರ ಕಾಲೆಳೆದರು.         

short by Pawan / more at Kannada Prabha

Comments