Skip to main content


ರಾಜಸ್ಥಾನ ವಿರುದ್ಧ ಸುಲಭ ಜಯ ದಾಖಲಿಸಿದ ಹೈದರಾಬಾದ್

ಐಪಿಎಲ್‌ 2018ರ ನಾಲ್ಕನೇ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್‌ ತಂಡದ ವಿರುದ್ಧ ಸನ್‌ರೈಸರ್ಸ್‌ ಹೈದರಾಬಾದ್ ತಂಡ 9 ವಿಕೆಟ್ ಗಳ ಸುಲಭ ಜಯ ದಾಖಲಿಸಿದೆ. ಹೈದರಾಬಾದ್ ಪರ ಆರಂಭಿಕ ಆಟಗಾರ ಶಿಖರ್ ಧವನ್ ಅವರು ಅಜೇಯ 77ರನ್ ಗಳಿಸಿದರೆ, ನಾಯಕ ವಿಲಿಯಮ್ಸನ್ 36ರನ್ ಗಳಿಸಿದರು. 15.5 ಓವರ್ ಗಳಲ್ಲಿ 127/1 ಸ್ಕೋರ್ ಮಾಡಿ, ಜಯ ದಾಖಲಿಸಿತು.ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ರಾಜಸ್ಥಾನ ರಾಯಲ್ಸ್‌ ತಂಡವು ಹೈದರಾಬಾದ್ ತಂಡದ ಕರಾರುವಾಕ್ ದಾಳಿಯ ಮುಂದೆ ತಡಬಡಾಯಿಸಿತು. ದೊಡ್ಡ ಜೊತೆಯಾಟ ಆಡುವಲ್ಲಿ ಹೈದರಾಬಾದ್ ಬ್ಯಾಟ್ಸ್‌ಮನ್‌ಗಳು ಸಫಲರಾಗಲಿಲ್ಲ. ಯುವ ಆಟಗಾರ ಸಂಜು ಸ್ಯಾಮ್‌ಸನ್‌ ಅವರು ಅಲ್ಪ ಹೊರಾಟ ಮಾಡಿದರಾದರೂ ಅರ್ಧಶತಕಕ್ಕೆ ಒಂದು ರನ್ ಕಡಿಮೆ (49) ಇದ್ದಾಗ ಕ್ಯಾಚಿತ್ತು ಹೊರನಡೆದರು. ಹೈದರಾಬಾದ್ ಪರ ಶಕಿಬ್ ಉಲ್ ಹಸನ್ 4 ಓವರ್‌ಗೆ 23 ರನ್ ನೀಡಿ 2 ವಿಕೆಟ್ ಗಳಿಸಿದರು.         

Short by Prajwal / read more at Oneindia

Comments