Skip to main content


ಕಾಸ್ಟಿಂಗ್ ಕೌಚ್ ನಿಂದಾಗಿ ಬಾಲಿವುಡ್ ನ ಬಿಗ್ ಆಫರ್ ತೊರೆದಿದ್ದೆ: ನಟಿ ಹರ್ಷಿಕಾ ಪೂಣಚ್ಛ

ತೆಲುಗು ಚಿತ್ರರಂಗದಲ್ಲಿ ಭಾರಿ ಸದ್ದು ಮಾಡುತ್ತಿರುವ ಕಾಸ್ಟಿಂಗ್ ಕೌಚ್ ಅನುಭವ ನನಗೂ ಆಗಿತ್ತು, ಇದೇ ಕಾರಣಕ್ಕೆ ನಾನು ಬಾಲಿವುಡ್ ನ ದೊಡ್ಡ ದೊಡ್ಡ ಚಿತ್ರಗಳನ್ನು ಕೈ ಬಿಟ್ಟಿದ್ದೆ ಎಂದು ಸ್ಯಾಂಡಲ್ ವುಡ್ ನಟಿ ಹರ್ಷಿಕಾ ಪೂಣಚ್ಛ ಹೇಳಿದ್ದಾರೆ. ತಮ್ಮ ಅಭಿನಯದ ಚಿಟ್ಟೆ ಚಿತ್ರದ ಹಾಡಿನ ಬಿಡುಗಡೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ನಟಿ ಹರ್ಷಿಕಾ, ಬಾಲಿವುಡ್ ನಲ್ಲಿ ನಾನು ಎರಡು ದೊಡ್ಡ ಸಿನೆಮಾ ಮಾಡಬೇಕಿತ್ತು. ಆದರೆ ಕಾಸ್ಟಿಂಗ್ ಕೌಚ್ ಗಾಗಿ ಬೇಡಿಕೆ ಇಟ್ಟಾಗ ಅದನ್ನು ತೊರೆದಿದ್ದೆ ಎಂದು ಹೇಳಿದ್ದಾರೆ. ಯಾರಾದರೂ ಈ ಬಗ್ಗೆ ಕೇಳಿದಾಗ ವಯಸ್ಸಿನ ಅಂತರದಿಂದಾಗಿ ಆ ಚಿತ್ರ ಕೈಬಿಟ್ಟಿದ್ದಾಗಿ ಸಬೂಬು ಹೇಳುತ್ತಿದ್ದೆ. ಈ ಬಗ್ಗೆ ಯಾರಾದರು ಪ್ರಶ್ನೆ ಕೇಳಿದಾಗ ಮುಜುಗರಕ್ಕೊಳಗಾಗುತ್ತಿದೆ ಎಂದು ಹರ್ಷಿಕಾ ಹೇಳಿದ್ದಾರೆ. ಇದೇ ವಿಚಾರವಾಗಿ ತಮ್ಮ ಸಾಮಾಜಿಕ ಜಾಲತಾಣದ ಪುಟಗಳಲ್ಲಿ ಚುಟುಕಾಗಿ ಪ್ರತಿಕ್ರಿಯೆ ನೀಡಿರುವ ಹರ್ಷಿಕಾ ಯಾರಾದರೂ ನಿಮಗೆ ಇಷ್ಟವಿಲ್ಲದ್ದನ್ನು ಕೇಳಿದರೆ, ಇಲ್ಲ ಎಂದು ಹೇಳಿ. ರೆಬೆಲ್ ಆಗಿ ಜೀವನ ಸಾಗಿಸಿ ಎಂದು ಟ್ವೀಟ್ ಮಾಡಿದ್ದಾರೆ.   

short by Pawan / more at Kannada Prabha

Comments