Skip to main content


ಈ ವರ್ಷವೇ ಶ್ರದ್ದಾ ಕಪೂರ್ ಮದುವೆಯಂತೆ!

ಸಿನಿರಂಗದಲ್ಲಿ ನಟಿಯರಿಗೆ ಅಥವಾ ನಟರಿಗೆ ಮದುವೆ ಅಂದ್ರೆ ಸಾಕು ಎಲ್ಲರ ಕಿವಿ ನೆಟ್ಟಗಾಗುತ್ತವೆ. ಯಾಕಂದ್ರೆ ಸಿನಿರಂಗವೇ ಹಾಗೆ. ಹೌದು, ಬಾಲಿವುಡ್ ಅಂಗಳದಲ್ಲಿ ಸದ್ಯ ಶ್ರದ್ದಾ ಕಪೂರ್ ಅವರದ್ದೇ ಸುದ್ದಿ, ಯಾಕಂದ್ರೆ ಅವರು ಟ್ವಿಟ್ ಮಾಡಿರೋ ಒಂದು ಪೋಸ್ಟ್ ಇಷ್ಟೆಲ್ಲಾ ಚರ್ಚೆಗೆ ಕಾರಣವಾಗಿದೆ. ಹೌದು ಇತ್ತೀಚೆಗೆ ಶ್ರದ್ದಾ ಕಪೂರ್ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಶ್ರದ್ಧಾ ಹಳದಿ ಬಣ್ಣದ ಲೆಹಂಗಾ ಹಿಡಿದುಕೊಂಡ ಫೋಟೋ ಹಾಕಿದ್ದಾರೆ. 'ಈ ವರ್ಷ ನಡೆಯುವ ಅತಿ ದೊಡ್ಡ ಅರಿಶಿಣ ಶಾಸ್ತ್ರಕ್ಕೆ ಸಿದ್ಧಗೊಳ್ಳುತ್ತಿದ್ದೇನೆ' ಎಂದು ಬರೆದುಕೊಂಡಿದ್ದಾರೆ. ಇನ್ನು ಶ್ರದ್ದಾ ಸಿನಿಮಾ ವಿಚಾರ ಬಿಟ್ಟರೆ ಮದುವೆ, ಡೇಟಿಂಗ್ ವಿಚಾರದಲ್ಲಿ ಶ್ರದ್ಧಾ ಕಾಂಟ್ರವರ್ಸಿ ಮಾಡಿಕೊಂಡಿದ್ದು ತೀರಾ ಕಡಿಮೆ. ಅಲ್ಲದೆ, ಖಾಸಗಿ ಬದುಕಿನ ಬಗ್ಗೆ ಅವರು ಸಾರ್ವಜನಿಕವಾಗಿ ಮಾತಾಡಿಯೂ ಇಲ್ಲ. ಹಾಗಾಗಿ ಅವರು ಸದ್ದಿಲ್ಲದೆ ಮದುವೆಗೆ ತಯಾರಿ ನಡೆಸಿಕೊಳ್ಳುತ್ತಿದ್ದಾರಾ ಅನ್ನೋ ಕುತೂಹಲ ಕೂಡ ಇದಿಗ ಎಲ್ಲರಲ್ಲೂ ಕಾಡುತ್ತಿದೆ. ಸದ್ಯ ಸಾಹೋ ಚಿತ್ರದ ಶೂಟಿಂಗ್‌ನಲ್ಲಿ ಶ್ರದ್ಧಾ ಬ್ಯುಜಿಯಿದ್ದಾರೆ. ಪ್ರಭಾಸ್ ಮುಖ್ಯಭೂಮಿಕೆ ನಿರ್ವಹಿಸುತ್ತಿರುವ ಈ ಸಿನಿಮಾದ ಚಿತ್ರೀಕರಣ ದುಬೈನಲ್ಲಿ ನಡೆಯುತ್ತಿದೆ. ಸಾಹೋ ಮೂಲಕ ಅವರು ಟಾಲಿವುಡ್ ಮಂದಿಗೆ ಪರಿಚಯವಾಗುತ್ತಿರುವುದು ವಿಶೇಷ. 'ಬಾಹುಬಲಿ' ಸರಣಿ ನಂತರ ಪ್ರಭಾಸ್ ನಟನೆಯಲ್ಲಿ ತೆರೆಕಾಣುತ್ತಿರುವ ಚಿತ್ರ ಇದಾಗಿರುವುದರಿಂದ ಸಹಜವಾಗಿಯೇ ಹೆಚ್ಚು ನಿರೀಕ್ಷೆ ಇಟ್ಟುಕೊಳ್ಳಲಾಗಿದೆ. ಇನ್ನು ಶ್ರದ್ಧಾ, 'ಬತ್ತಿ ಗುಲ್ ಮೀಟರ್ ಚಾಲು' ಚಿತ್ರದಲ್ಲಿ ಶಾಹಿದ್ ಕಪೂರ್‌ಗೆ ಜತೆಯಾಗಿ ನಟಿಸುತ್ತಿದ್ದಾರೆ.   

short by Pawan / more at Balkani News


Comments